

ತುಮಕೂರು: ನಗರದ ಭಗತ್ ಕ್ರಾಂತಿ ಸೇನೆ ವತಿಯಿಂದ ಅಖಂಡ ಭಾರತ ಜಾಗೃತಿ ದಿವಸ್ ಅಂಗವಾಗಿ ಆ.14ರಂದು ರಾತ್ರಿ 8ಕ್ಕೆ ಪಂಜಿನ ಮೆರವಣಿಗೆ ಆಯೋಜಿಸಲಾಗಿದೆ.
ಶಿವಕುಮಾರಸ್ವಾಮೀಜಿ ವೃತ್ತದಿಂದ ಆರಂಭವಾಗಿ ದೋಭಿಘಾಟ್ ಮೂಲಕ ಸಾಗಿ ಕೆಂಪಣ್ಣನ ಅಂಗಡಿ ವೃತ್ತದಲ್ಲಿ ತಿರುವು ಪಡೆದು ಎಸ್‌ಐಟಿ ಮುಖ್ಯರಸ್ತೆಯ ಮೂಲಕ ಎಸ್‌ಐಟಿ ಮುಖ್ಯರಸ್ತೆಯಲ್ಲಿ ಮೆರವಣಿಗೆ ಕೊನೆಯಾಗಲಿದೆ.
ರಾತ್ರಿ ಎಸ್‌ಐಟಿ ಮುಖ್ಯರಸ್ತೆಯಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ಬೆಳ್ಳಾವಿ ಕಾರದ ಮಠದ ಶ್ರೀಕಾರದ ವೀರಬಸವ ಸ್ವಾಮೀಜಿ, ಪೌರ ಕಾರ್ಮಿಕ ಕೆಂಪಣ್ಣ, ನಿವೃತ್ತ ಯೋಧ ಎನ್.ನಾಗರಾಜು ಭಾಗವಹಿಸಲಿದ್ದಾರೆ.