ತುಮಕೂರು ಬಿಜೆಪಿಗೆ ಸ್ತ್ರೀ ಶಕ್ತಿ!

27Tmk_BJP_Serpade_01
Published on

ತುಮಕೂರು: ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ವಾರ್ಡ್ಗಳ ಸಾವಿರಾರು ಮಹಿಳೆಯರು ಬಿಜೆಪಿ ಸೇರ್ಪಡೆಯಾಗುವ ಮೂಲಕ ಪಕ್ಷಕ್ಕೆ ಹೆಚ್ಚಿನ ಬಲ ತುಂಬಿದರು.


ನಗರದ ಭದ್ರಂ ಚೌಲ್ಟ್ರಿ ಬಳಿಯ ಬಿಜೆಪಿ ಕಾರ್ಯಾಲಯ ಕಮಲ ಕೃಪದಲ್ಲಿ ಗುರುವಾರ ರಕ್ಷಣೆಗಾಗಿ ನಗರದ ವಿವಿಧ ಮಹಿಳಾ ಸಂಘಟನೆಗಳು ಬಿಜೆಪಿ ಪಕ್ಷವನ್ನು ಸೇರುತ್ತಿದ್ದು ಯಾವುದೇ ಷರತ್ತುಗಳಿಲ್ಲದೇ ನಮ್ಮ ರಕ್ಷಣೆಗಾಗಿ ಶಾಸಕ ಜ್ಯೋತಿಗಣೇಶ್ ಸಮ್ಮುಖದಲ್ಲಿ ಪಕ್ಷವನ್ನು ಸೇರುತ್ತಿದ್ದೇವೆ ಎಂದು ವಿನೋದ ತಿಳಿಸಿದರು.


ದೇವರ ಮೇಲೆ ಮಹಿಳೆಯರಿಗೆ ಅತ್ಯಂತ ಭಯ, ಭಕ್ತಿಯಿದ್ದು, ಅದನ್ನೇ ಬಂಡವಾಳ ಮಾಡಿಕೊಂಡು ಕಳೆದ 6-7 ತಿಂಗಳುಗಳಿAದ ಹೆತ್ತೇನಹಳ್ಳಿ ಮಾರಮ್ಮನ ಮೇಲೆ ಆಣೆ ಪ್ರಮಾಣ ಮಾಡಿಸುತ್ತಾ, ಮನೆ ಮನೆಗೆ ಸೀರೆ, ಬಳೆ, ದೇವರ ಪೋಟೋ ಹಾಗೂ ಹಣವನ್ನು ಹಂಚುತ್ತಾ ಆಮಿಷ ಒಡ್ಡಲಾಗುತ್ತಿದೆ. ಇದರ ಜತೆಗೆ ಮಹಿಳೆಯರಿಗೆ ವೈಯಕ್ತಿಕವಾಗಿ ರಕ್ಷಣೆಯೇ ಇಲ್ಲವೆಂಬ ಭಯ ಕಾಡುತ್ತಿದ್ದು ಅನಿವಾರ್ಯವಾಗಿ ಬಿಜೆಪಿ ಸೇರುವಂತಾಗಿದೆ ಎಂದರು.


ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರು ಸೌಮ್ಯ ಸ್ವಭಾವದ ಸಭ್ಯ, ಸಂಸ್ಕಾರಯುತ ವಿದ್ಯಾವಂತ ರಾಜಕಾರಣಿಯಾಗಿದ್ದು ಇವರ ಅವಧಿಯಲ್ಲಿ ನಗರದ ಚಿತ್ರಣವೇ ಬದಲಾಗಿದೆ. ಬೇಟಿ ಬಚಾವೋ, ಬೇಟಿ ಪಡಾವೋ ಸಿದ್ಧಾಂತದ ಬಿಜೆಪಿಯನ್ನು ಮತ್ತೊಮ್ಮೆ ಬೆಂಬಲಿಸಿ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರುವಂತೆ ಹರಿಯಾಣ ಬಿಜೆಪಿ ಶಾಸಕಿ ಲತಿಕಾಶರ್ಮ ಹೇಳಿದರು.


ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಅಂಬಿಕಾ ಹುಲಿನಾಯ್ಕರ್, ನಗರ ಮಂಡಲ ಅಧ್ಯಕ್ಷ ಟಿ.ಹೆಚ್. ಹನುಮಂತರಾಜು ಹಾಗೂ ಮಹಿಳಾ ಮುಖಂಡರಾದ ಯಶೊಧ, ಅನಿತಾ, ಇಂದ್ರಮ್ಮ, ಮಂಜುಳ, ವಿನುತಾ, ಸಂಸ್ಕೃತಿ, ಮಂಜುಳ ನೇತೃತ್ವದಲ್ಲಿ ಸಾವಿರಾರು ಮಹಿಳೆಯರು ಬಿಜೆಪಿ ಪಕ್ಷವನ್ನು ಸೇರ್ಪಡೆಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net