ಬಿಜೆಪಿ ಶಾಸಕ ಬಿ.ಸುರೇಶ್​ಗೌಡ ಶ್ರೀಘ್ರ ಕಾಂಗ್ರೆಸ್​ ಸೇರ್ಪಡೆ!?

SureshGowda_PC_01
Published on

ತುಮಕೂರು: ಬಿಜೆಪಿ ಶಾಸಕ ಬಿ.ಸುರೇಶ್​ಗೌಡ ಬಿಜೆಪಿಗಿಂತಲೂ ಕಾಂಗ್ರೆಸ್​ ಬಗ್ಗೆಯೇ ಹೆಚ್ಚು ಚಿಂತಿಸುತ್ತಾರೆ ಅವರಿಗೆ ಕಾಂಗ್ರೆಸ್​ ಬಗ್ಗೆ ಅಭಿಮಾನವಿದ್ದು ಡಾ.ಜಿ.ಪರಮೇಶ್ವರ್​ ಒಪ್ಪಿದರೆ ಶ್ರೀದಲ್ಲಿಯೇ ಕಾಂಗ್ರೆಸ್​ ಸೇರ್ಪಡೆಯಾಗಲಿದ್ದಾರೆ ಎಂದು ಕುಣಿಗಲ್​ ಶಾಸಕ ಡಾ.ಎಚ್​.ಡಿ.ರಂಗನಾಥ್​ ಬಾಂಬ್​ ಸಿಡಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ನೇತೃತ್ವದಲ್ಲಿ ಆಯೋಜಿಸಿದ್ದ ತುಮಕೂರು ದಸರಾ ಲಾಂಛನ ಬಿಡುಗಡೆ ಸಮಾರಂಭದ ವೇದಿಕೆಯಲ್ಲಿಯೇ ಕುಳಿತಿದ್ದ ಸುರೇಶ್​ಗೌಡ ಕೂಡ ಹೇಳಿಕೆಗೆ ಪ್ರತಿರೋಧ ತೋರದೆ ನಗುತ್ತಿದ್ದರು.

ಇದಕ್ಕೂ ಪೂರ್ವದಲ್ಲಿ ಮಾತನಾಡಿದ್ದ ಬಿ.ಸುರೇಶ್​ಗೌಡ ಕೂಡ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಅವರನ್ನು ಹಾಡಿಹೊಗಳಿದರು, ತುಮಕೂರಿನಲ್ಲಿ ದಸರಾ ಆರಂಭಿಸಿರುವ ಪರಮೇಶ್ವರ್​ ಮೈಸೂರು ದಸರಾ ಸಂದರ್ಭದಲ್ಲಿಯೂ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವ ಅವಕಾಶ ಪಡೆಯಬೇಕು ಎಂದು ಆಶಿಸಿದರು.

ಪರಮೇಶ್ವರ್​ ಮುಖ್ಯಮಂತ್ರಿಯಾಗುವುದು ಕುಣಿಗಲ್​ ಶಾಸಕ ರಂಗನಾಥ್​ಗೆ ಬೇಸರ ಮೂಡಿಸಬಹುದು ಆದರೆ,ಪರಮೇಶ್ವರ್ ರಾಜ್ಯದ ಸಿಎಂ ಆಗಬೇಕು ಮೈಸೂರು ದಸರಾದಲ್ಲಿಯೂ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಬೇಕು ಎಂಬುದು ನಮ್ಮೆಲ್ಲರ ಬಯಕೆ ಎಂದು ವಿಷಯ ಪ್ರಸ್ತಾಪಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net