ಬೈಕ್​ ಕಳ್ಳನ ಬಂಧನ

28TMK_Crimme_BYK11
Published on

ತುಮಕೂರು: ನೂರಾರು ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿದ್ದ ಅರೋಪಿಯನ್ನು ಕ್ಯಾತಸಂದ್ರ ಪೊಲೀಸರು ಬಂಧಿಸಿದ್ದು 42 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಕ್ಯಾತಸಂದ್ರ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದ ವಾಹನಗಳ ಕಳ್ಳತನ ಪ್ರಕರಣದ ಆರೋಪಿ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡ ಶಿಡ್ಲಟ್ಟದ ಮುಬಾರಕ್​ಖಾನ್​(53)ನನ್ನು ಬಂಧಿಸಿ ವಾಹನಗಳನ್ನು ವಶಪಡಿಸಿಕೊಂಡಿದೆ.

ರೋಪಿ ಮುಭಾರಕ್​ ಖಾನ್​ @ ಮಟನ್​ ಮುಭಾರಕ್​ ಬಿನ್​ ಮುಸ್ತಫಾ, 53 ವರ್ಷ, ಶಿಡ್ಲಘಟ್ಟ ಟೌನ್​ ರವರನ್ನು ವಶಕ್ಕೆ ಪಡೆದಿದ್ದು, ಕ್ಯಾತಸಂದ್ರ ಪೊಲೀಸ್​ ಠಾಣೆಯ ವ್ಯಾಪ್ತಿಯ 2, ತುಮಕೂರು ನಗರ 3, ಶ್ರೀನಿವಾಸಪುರ 2, ಆಂದ್ರಪ್ರಾದೇಶದ ಕುಪ್ಪಂ ಠಾಣೆಗೆ 1, ರಾರ್ಬಟ್​ಸನ್​ ಪೇಟೆ 1, ಯಲಹಂಕ 1, ಬಾಗೇಪಲ್ಲಿ 1, ಪಾವಗಡ 1, ದೊಡ್ಡಬಳ್ಳಾಪುರ 1, ನೆಲಮಂಗಲ 1, ಬೆಂಗಳೂರು ರೈಲ್ವೆ 1 ಸೇರಿದಂತೆ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿರುವುದು ತನಿಖೆಯಲ್ಲಿ ದೃಢವಾಗಿದೆ.

ಪ್ರಕರಣ ದಾಖಲಾಗದ 27 ಸೇರಿದಂತೆ 21.60ಲಕ್ಷ ರೂ. ಬೆಲೆಬಾಳುವ ಒಟ್ಟು 42 ದ್ವಿಚಕ್ರ ವಾಹನ ವಶಪಡಿಸಿಕೊಳ್ಳಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net