ಅಗ್ನಿಶಾಮಕ ಠಾಣೆಗೆ ನುಗ್ಗಿದ ಕರಡಿ

Bear
Published on

ಪಾವಗಡ:ಪಟ್ಟಣದ ಅಗ್ನಿಶಾಮಕ ಠಾಣೆಯ ಆವರಣದಲ್ಲಿ ಶನಿವಾರ ರಾತ್ರಿ ಕರಡಿ ಕಾಣಿಸಿಕೊಂಡಿದ್ದು ಸಿಬ್ಬಂದಿ ಹಾಗೂ ಸ್ಥಳೀಯರು ಭಯದಲ್ಲಿಯೇ ಓಡಾಡುವಂತಾಗಿದೆ.

ಪಟ್ಟಣದ ಬಳ್ಳಾರಿ ರಸ್ತೆ ಮಾರ್ಗದ ಎಪಿಎಂಸಿ ಮಾರ್ಕೆಟ್ ಸಮೀಪದಲ್ಲಿರುವ ಅಗ್ನಿಶಾಮಕ ಠಾಣೆಯ ಒಂದು ಭಾಗದಲ್ಲಿ ಮಾತ್ರ ಕಾಂಪೌಂಡ್​ ಗೋಡೆ ನಿರ್ಮಿಸಲಾಗಿದ್ದು ಮತ್ತೊಂದು ಭಾಗದಲ್ಲಿ ಯಾವುದೇ ರಕ್ಷಣೆ ಇಲ್ಲ. ಪ್ರತಿದಿನವೂ ರಾತ್ರಿ ಕಾಡು ಪ್ರಾಣಿಗಳು ಠಾಣೆಯ ಆವರಣದಲ್ಲಿ ಕಾಣಿಸಿಕೊಳ್ಳಲಾರಂಭಿಸಿದ್ದು ಸಮಸ್ಯೆಗೆ ಶಾಶ್ವತ ಪರಿಹಾರ ಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net