ಪ್ರೀತಿಯ ಪ್ರಶಸ್ತಿ ಅದುವೇ ನಿಜವಾದ ಪ್ರಶಸ್ತಿ; ನಾಡೋಜ ಡಾ.ಬರಗೂರು

1676467071212
Published on

ಬರಗೂರು: ನನ್ನ ಮೇಲೆ ನೀವಿಟ್ಟಿರುವ ಪ್ರೀತಿಯೇ ನನ್ನ ಎಲ್ಲಾ ಪ್ರಶಸ್ತಿಗಳಿಗಿಂತ ಮಿಗಿಲು. ಪ್ರೀತಿಯ ಪ್ರಶಸ್ತಿ ಅದುವೇ ನಿಜವಾದ ಪ್ರಶಸ್ತಿ. ಮನುಷ್ಯ ಪ್ರೀತಿಗೆ ನಾನು ಚಿರಋಣಿ ಎಂದು ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ಭಾವುಕರಾದರು.

ಶಿರಾ ತಾಲೂಕು ಬರಗೂರಿನ ಸಾಂಸ್ಕೃತಿಕ ಭವನದಲ್ಲಿ ಬುಧವಾರ ನಾಡೋಜ ಡಾ.ಬರಗೂರು ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ ಪ್ರೊ.ಬರಗೂರು ರಾಮಚಂದ್ರಪ್ಪ ಹುಟ್ಟಿದ ಮನೆ ಮ್ಯೂಸಿಯಂ ತೊಟ್ಟಿಲು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಒಬ್ಬ ಲೇಖಕನ್ನು ರೂಪಿಸುವರು ಓದುಗರು. ಕಲಾವಿದರನ್ನು ರೂಪಿಸುವರು ನೋಡುಗರು. ಗಾಯಕರನ್ನು ರೋಪಿಸುವರು ಕೇಳುಗರು. ನಮ್ಮ ನಿಜವಾದ ಯಶಸ್ಸಿನ ಗುಟ್ಟು ನೀವು ಎಂದರು.

ನಾವು ಏನಾಗಬೇಕೆಂದು ಸಂಕಲ್ಪ ಮಾಡಿಕೊಂಡಾಗ ಮಾತ್ರ ಸಾಧಿಸಲು ಸಾಧ್ಯ. ನಾವು ಇದ್ದೆಡೆಯೇ ಸಂಕಲ್ಪ , ಬದ್ಧತೆ ತೋರಿದರೆ ಉನ್ನತಮಟ್ಟಕ್ಕೆ ಬೆಳೆಯಬಹುದು. ನನ್ನ ಕುಟುಂಬದ ಜತೆ ಪ್ರತಿಷ್ಠಾನದ ಒಳಗದವರು ನನ್ನೂರಿನಲ್ಲಿ ಮ್ಯೂಸಿಯಂ ತೊಟ್ಟಿಲು ಮಾಡಿರುವುದು ನನಗೆ ಹರ್ಷ ತಂದಿದೆ ಎಂದು ತಿಳಿಸಿದರು.
ಬರಗೂರು ಸಹೋದರ ಬಿ.ಆರ್. ಚಿಕ್ಕರಂಗಪ್ಪ, ಚಲನಚಿತ್ರ ಕಲಾವಿದರಾದ ರೇಖಾ, ಕುಮಾರ್ ಗೋವಿಂದ್, ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಡಾ.ಸುಂದರ್ ಅರಸ್, ಸಾಹಿತಿ ಡಾ.ರಾಜಪ್ಪ ದಳವಾಯಿ, ಗಾಯಕಿ ಡಾ.ಶಮಿತಾ ಮಲ್ನಾಡ್, ದೊಡ್ಡಬಾಣಗೆರೆ ಮಾರಣ್ಣ, ರೂಪೇಶ್ ಕೃಷ್ಣಯ್ಯ, ಪ್ರೊ. ಹನುಮಂತರಾಯಪ್ಪ, ಶಿರಾ ತಾಲೂಕು ಕಸಾಪ ಅಧ್ಯಕ್ಷ ಪಾಂಡುರAಗಯ್ಯ, ಬರಗೂರು ಗ್ರಾಪಂ ಅಧ್ಯಕ್ಷ ಲಕ್ಷö್ಮಣ ಮತ್ತಿತರರು ಇದ್ದರು.

ನನ್ನ ಮಕ್ಕಳು ಚಿಕ್ಕವಾರಾಗಿದ್ದಾಗ ನನ್ನ ಗ್ರಾಮಕ್ಕೆ ಬರುವಾಗ ಬರಗೂರು ನಾಮಫಲಕ ಕಾಣುತ್ತಿದ್ದಂತೆ ಇದೇನಾಪ್ಪ ನಿಮ್ಮ ಹೆಸರು ಊರಿಗಿಟ್ಟಾರೆಂದು ಕೇಳುತ್ತಿದ್ದಾಗ ಅದೇ ನನಗೆ ಬಹಳ ದೊಡ್ಡ ಪ್ರಶಸ್ತಿ ಆಗಿತ್ತು. ರಾಮಚಂದ್ರಪ್ಪ ಎನ್ನದೇ ಬರಗೂರು ಎಂದೆ ನನ್ನ ಗುರುತಿಸುವರು ಎಂದು ಪ್ರೊ. ಡಾ.ಬರಗೂರು ರಾಮಚಂದ್ರಪ್ಪ ತನ್ನೂರಿನೆಡೆಗಿನ ಪ್ರೀತಿ ತೋರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net