ಮದ್ಯ ಮಾರಾಟ ನಿಷೇಧ

ppp
Published on

ತುಮಕೂರು: ಶಿರಾ ನಗರದಲ್ಲಿ ಸೆ.21ರಂದು ಶ್ರೀಗವಿ ಆಂಜನೇಯ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿರುವ ಶ್ರೀಹಿಂದೂ ಮಹಾಸಭಾ ಗಣಪತಿ ಹಾಗೂ ಸೆ. 22ರಂದು ಗಣೇಶ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿರುವ ಶ್ರೀವಿದ್ಯಾಗಣಪತಿ ವಿಸರ್ಜನಾ ಕಾರ್ಯಕ್ರಮ ನಡೆಯಲಿದೆ.

ಗಣಪತಿ ಮೂರ್ತಿಯ ವಿಸರ್ಜನಾ ಮೆರವಣಿಗೆ ಹಾದು ಹೋಗುವ ಪ್ರಮುಖ ಸ್ಥಳಗಳಲ್ಲಿ ಅಹಿತಕರ ಘಟನೆಗಳು ಜರುಗದಂತೆ ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಶಿರಾ ನಗರದ 5 ಕಿಮೀ ವ್ಯಾಪ್ತಿಯಲ್ಲಿ ಸೆ.21ರ ಬೆಳಗ್ಗೆ 6 ರಿಂದ ಸೆ.22ರ ಮಧ್ಯರಾತ್ರಿ 12ರ ವರೆಗೂ ಒಣ ದಿನವೆಂದು ಘೋಷಿಸಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಶುಭಕಲ್ಯಾಣ್​ ಆದೇಶಿಸಿದ್ದಾರೆ.

ತುಮಕೂರು ನಗರದ ಬಿಜಿಎಸ್​ ಸರ್ಕಲ್​ನಲ್ಲಿರುವ ನಾಗರಕಟ್ಟೆಯ ವಿಶ್ವ ಹಿಂದೂ ಪರಿಷತ್​ ಭಜರಂಗದಳ ಹಾಗೂ ಹಿಂದೂ ಜಾಗರಣಾ ವೇದಿಕೆ ಮುಖಂಡರು ಪ್ರತಿಷ್ಟಾಪನೆ ಮಾಡಿರುವ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆ ಹಾಗೂ ಶೋಭಾಯಾತ್ರೆ ಸೆ.21ರಂದು ನಡೆಸುತ್ತಿದೆ.

ಗಣಪತಿ ಮೂರ್ತಿ ವಿಸರ್ಜನಾ ಮೆರವಣಿಗೆ ಹಾದು ಹೋಗುವ ಪ್ರಮುಖ ಸ್ಥಳಗಳಲ್ಲಿ ಅಹಿತಕರ ಘಟನೆಗಳು ಜರುಗದಂತೆ ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಸೆ.21ರ ಬೆಳಗ್ಗೆ 6 ರಿಂದ ಮಧ್ಯರಾತ್ರಿ 12ರ ವರೆಗೆ ಒಣ ದಿನವೆಂದು ಘೋಷಿಸಿ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್​ ಆದೇಶ ಹೊರಡಿಸಿದ್ದಾರೆ.

ಈ ಆದೇಶದನ್ವಯ ಕೆಎಸ್​ಬಿಸಿಎಲ್​ ಡಿಪೋ ಹೊರತುಪಡಿಸಿ ಎಲ್ಲಾ ತರಹದ ಮದ್ಯ ಮಾರಾಟ, ಸಾಗಾಣಿಕೆಯನ್ನು ನಿಷೇಧಿಸಲಾಗಿದೆ ಎಂದು ಸೂಚಿಸಿದ್ದಾರೆ.

ಭಜರಂಗದಳದ ನಾಗರಕಟ್ಟೆ ಗಣಪತಿ ವಿಸರ್ಜನಾ ಮೆರವಣಿಗೆ ಬಂದೋಬಸ್ತ್ ಕರ್ತವ್ಯಕ್ಕಾಗಿ ಇಬ್ಬರು ಡಿವೈಎಸ್​ಪಿ, 9 ಇನ್ಸ್‌ಪೆಕ್ಟರ್, 20 ಸಬ್ ಇನ್ಸ್‌ಪೆಕ್ಟರ್, 62 ಎಎಸ್ಐ, 520 ಪೊಲೀಸ್ ಕಾನ್ಸ್‌ಟೇಬಲ್, 100 ಹೋಂ ಗಾರ್ಡ್ಸ್, 3 ಕೆಎಸ್ಆರ್ ಪಿ ಹಾಗೂ 5 ಡಿಎಆರ್ ತುಕ್ಕಡಿ ನಿಯೋಜಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net