ಬಾಂಧವ್ಯ ಬದುಕಿನ ಬುನಾದಿಯಾಗಲಿ

22_bandavya
Published on

ತುಮಕೂರು: ಕೂಡಿ ಬಾಳುವ, ಕೂಡಿ ದುಡಿಯುವ, ಕೂಡಿ ಉಣ್ಣುವ ಮಹಾಗುಣವಾಗಿರುವ ಬಾಂಧವ್ಯ ಬದುಕಿನ ಬುನಾದಿಯಾಗಲಿ ಎಂದು ವಿದ್ಯಾವಾಚಸ್ಪತಿ ಡಾ.ಕವಿತಾಕೃಷ್ಣ ಅಭಿಪ್ರಾಯಪಟ್ಟರು.

ನಗರದ ಮಾರುತಿನಗರ ಬಾಂಧವ್ಯ ಮಹಿಳಾ ಸಮಾಜದ ಮಾಸಿಕ ಸಮಾರಂಭದಲ್ಲಿ ಉಪನ್ಯಾಸ ನೀಡಿದ ಅವರು, ಇಂದಿನ ಮಹಿಳೆಯರು ತಮ್ಮ ತಮ್ಮ ಕುಟುಂಬಗಳನ್ನು ಸರ್ವಾಂಗೀಣ ಪ್ರಗತಿಯತ್ತ ಕೊಂಡೊಯ್ಯಲು ಮುಂದಾಗಬೇಕು ಎಂದರು.

ಕುಟುಂಬದ ಕಲ್ಯಾಣವಾದರೆ ರಾಷ್ಟçದ ಕಲ್ಯಾಣ ತಾನಾಗಿಯೇ ಆಗುತ್ತದೆ. ಮಕ್ಕಳು ಮೊಬೈಲ್‌ನಿಂದ, ಮಹಿಳೆಯರು ದೂರದರ್ಶನ ಪೆಟ್ಟಿಗೆಗಳಿಂದ ಮೊದಲು ದೂರಾಗಬೇಕು ಎಂದರು.

ಬಾಂಧವ್ಯ ಮಹಿಳಾ ಸಮಾಜದ ಅಧ್ಯಕ್ಷೆ ಲಕ್ಷ್ಮೀಅಯ್ಯಂಗಾರ್, ವೇದಿಕೆ ಪದಾಧಿಕಾರಿಗಳಾದ ಪ್ರೇಮ, ಜಯಲಕ್ಷ್ಮಿ, ರಾಧಾ, ಸಾವಿತ್ರಿ, ಜಯಶ್ರೀ, ಲಕ್ಷ್ಮಿ, ವಸುಂಧರ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net