

ತುಮಕೂರು: ಗ್ರಾಮೀಣ ಭಾಗದಲ್ಲಿ ಸರ್ಕಾರಿ ಭೂಮಿಗಳಿಂದ ಅವೈಜ್ಞಾನಿಕವಾಗಿ ಮಣ್ಣು ತೆಗೆದು ನಗರ ಪ್ರದೇಶಗಳಿಗೆ ಮಾರಾಟ ಮಾಡುತ್ತಿರುವನ ಮಣ್ಣು ಕಳ್ಳರ ಮೇಲೆ ಕಂದಾಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದ್ದಾರೆ.
ಮಧುಗಿರಿ ತಾಲೂಕು ದೊಡ್ಡೇರಿ ಹೋಬಳಿ ಮದ್ಲೇರಹಳ್ಳಿ ಗ್ರಾಮದ ಮಧುಗಿರಿ ತಹಸೀಲ್ದಾರ್ ಸ್ಥಳೀಯ ಪೊಲೀಸರ ಸಹಕಾರ ಪಡೆದು ಸಹಕಾರದಿಂದ ದಿಢೀರ್ ದಾಳಿ ನಡೆಸಿ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಮಣ್ಣು ತೆಗೆದು ಸಾಗಾಣಿಕೆ ಮಾಡುತಿದ್ದ ಮೂರು ಟಿಪ್ಪರ್, ಇಂದು ಇಟಾಚಿಯನ್ನು ವಶಕ್ಕೆ ಪಡೆದಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ತುಮಕೂರು ತಾಲೂಕು ಕೋರ ಕಂದಾಯ ನಿರೀಕ್ಷಕ ಅರುಣ್‌ಕುಮಾರ್ ಸೋಗೇನಹಳ್ಳಿಯಲ್ಲಿ ದಾಳಿ ನಡೆಸಿ ಮಣ್ಣು ತುಂಬಿದ್ದ ಲಾರಿಯನ್ನು ವಶಕ್ಕೆ ಪಡೆದು, ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.