

ಅರಸೀಕೆರೆ: ಪಾವಗಡ ತಾಲೂಕು ಅರಸೀಕೆರೆ ಸರ್ಕಾರಿ ಪ್ರೌಢಶಾಲೆ ಚುನಾವಣಾ ಸಾಕ್ಷರತಾ ಕ್ಲಬ್ ಶನಿವಾರ ಶಾಲಾ ಸಂಸತ್ತಿನ ಚುನಾವಣೆ ನಡೆಸಿತು.
ವಿದ್ಯಾರ್ಥಿಗಳಲ್ಲಿ ಸರ್ಕಾರದ ರಚನೆಯ ಬಗ್ಗೆ, ಚುನಾವಣೆ ನಡೆಯುವ ಹಂತಗಳು, ಸಂಸತ್ತಿನ ರಚನೆ, ಚುನಾವಣಾ ಎಣಿಕೆ ಪ್ರಕ್ರಿಯೆ ಬಗ್ಗೆ ಮತ್ತು ಮತದಾನದ ಮಹತ್ವ ದ ಬಗ್ಗೆ ಅರಿವು ಮೂಡಿಸಲಾಯಿತು.
ಚುನಾವಣೆಯಲ್ಲಿ 8, 9 ಮತ್ತು 10 ನೇ ತರಗತಿಯ 130 ವಿದ್ಯಾರ್ಥಿಗಳ ಪೈಕಿ 20 ವಿದ್ಯಾರ್ಥಿಗಳು ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದರು. ಶಾಲಾ ಸಂಸತ್ತಿನ ರಚನೆಗೆ ಬೇಕಾದ 14 ಸ್ಥಾನಗಳಿಗೆ ಸಾಂವಿಧಾನಿಕವಾದ ಪದ್ದತಿಯಂತೆ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳಂತೆ ಮೊಬೈಲï ಮೂಲಕ ಇವಿಎಂ ಬಳಸಿ ನಡೆಸಲಾಯಿತು.
ಎನ್.ನಿತಿನ್ ಶಾಲಾ ಸಿಎಂ:
ಚುನಾವಣೆಯಲ್ಲಿ ಶಾಲಾ ಸಿಎಂ ಆಗಿ ಎನ್.ನಿತಿನ್, ವಿರೋಧ ಪಕ್ಷದ ನಾಯಕರಾಗಿ ಎ.ವಿ.ವೀರೇಶ್ , ಉಪ ಮುಖ್ಯಮಂತ್ರಿಯಾಗಿ ಗಾನವಿ, ಸಭಾಧ್ಯಕ್ಷರಾಗಿ ಭರತ್‌ಕುಮಾರ್, ಶಿಕ್ಷಣ ಮಂತ್ರಿಯಾಗಿ ವಿ.ಕೃಪಾ, ಕ್ರೀಡಾ ಮಂತ್ರಿಯಾಗಿ ಎಂ.ಭರತ್, ಕಾನೂನು ಮಂತ್ರಿಯಾಗಿ ಬಿಂದು, ಆಹಾರ ಮತ್ತು ಆರೋಗ್ಯ ಮಂತ್ರಿಯಾಗಿ ಮಾನ್ಯಶ್ರೀ, ಕನ್ನಡ ಸಂಸ್ಕೃತಿ ಸಚಿವೆಯಾಗಿ ಹೇಮಲತಾ, ಪರಿಸರ, ನೈರ್ಮಲ್ಯ ಮಂತ್ರಿಯಾಗಿ ಪಲ್ಕವಿ, ತೋಟಗಾರಿಕೆ ಮಂತ್ರಿಯಾಗಿ ಮೋಹನ್‌ಬಾಬು, ಗ್ರಂಥಾಲಯ ಮಂತ್ರಿಯಾಗಿ ಹನುಮಂತ ಹಾಗೂ ಇತರೆ ಹುದ್ದೆಗಳಿಗೆ ಯಶವಂತ್, ವಿನಯಕುಮಾರ್ ಆಯ್ಕೆಯಾದರು.