

ತುಮಕೂರು: ಗುಬ್ಬಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ವತಿಯಿಂದ ಎಲ್ಲಾ ವೃತ್ತಿಯ ಐಟಿಐ ಉತ್ತೀರ್ಣ ಹೊಂದಿರುವ ಅಭ್ಯರ್ಥಿಗಳಿಗಾಗಿ ಗುಬ್ಬಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಸೆ.27ರಂದು ಬೆಳಗ್ಗೆ 10ಕ್ಕೆ ಅಪ್ರೆಂಟಿಶಿಪ್ ಮೇಳ ಆಯೋಜಿಸಲಾಗಿದೆ.
ಈ ಮೇಳವನ್ನು ಬೆಂಗಳೂರಿನ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಜಂಟಿ ನಿರ್ದೇಶಕ ವೈಜಗೊಂಡ ಉದ್ಘಾಟಿಸಲಿದ್ದು ಗುಬ್ಬಿ ಸ.ಕೈ.ತ.ಸಂಸ್ಥೆ ಪ್ರಾಚಾರ್ಯ ಹೇಮಲತ, ಡಿಎಸ್ಡಿಒ ನೋಡಲ್ ಅಧಿಕಾರಿ ಟಿ.ಕೆ.ಕೆಂಪಯ್ಯ , ಉದ್ಯೋಗಾಧಿಕಾರಿ ಕಿಶೋರ್ಕುಮಾರ್ ಮತ್ತಿತರರು ಭಾಗವಹಿಸುವರು.
ಮಾಹಿತಿಗೆ ಮೊ.9620063375, 9481693710 ಸಂಪರ್ಕಿಸಿ.