

ತುಮಕೂರು: ಬೆಂಗಳೂರಿನ ಎಚ್‌ಎಎಲ್‌ನಲ್ಲಿ ವಿವಿಧ ಟ್ರೇಡ್‌ನಲ್ಲಿ ಐಟಿಐ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಅಪ್ರೆಂಟಿಸ್ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ Fitter, Turner, Machinist, Welder, COPA, Foundryman and Sheet Metal Worker, Carpenter, Mechanic R & AC, Tool and Die maker and Advanced CNC Machine ಟ್ರೇಡ್‌ನಲ್ಲಿ ಐಟಿಐ ಪಾಸಾದ ಅಭ್ಯರ್ಥಿಗಳು ಡಿ.28ರೊಳಗೆ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ಮುನ್ನ www.apprenticeship.gov.in ನಲ್ಲಿ ಕಡ್ಡಾಯವಾಗಿ ಅಪ್ರೆಂಟಿಸ್ ನೋಂದಣಿ ಮಾಡಿಕೊಂಡು ನಂತರ ಅರ್ಜಿ ಸಲ್ಲಿಸುವುದು. ಅರ್ಜಿಗಳನ್ನು ಬೆಂಗಳೂರಿನ ಎಚ್‌ಎಎಲ್ ಬೆಂಗಳೂರು ಕಚೇರಿಗೆ ಕಳುಹಿಸಬಹುದು.
ಮಾಹಿತಿಗೆ ಜಿಲ್ಲಾ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ತುಮಕೂರು. ದೂ.0816 2278488 ಸಂಪರ್ಕಿಸಿ.