ಅರಿವು ಸಾಲಕ್ಕೆ ಆನ್​ಲೈನ್​ ಅರ್ಜಿ

Application
Published on

ತುಮಕೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ವೃತ್ತಿಪರ ಕೋರ್ಸ್​ಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್​ಗಳಲ್ಲಿ ಆಯ್ಕೆಯಾದ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಅರಿವು ರಿನಿವಲ್​ ಸಾಲ ಯೋಜನೆಯಡಿ ಸಾಲ ಸೌಲಭ್ಯ ಕಲ್ಪಿಸಲು ಆನ್​ಲೈನ್​ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ವೈದ್ಯಕಿಯ, ದಂತ ವೈದ್ಯಕಿಯ, ಆಯುಷ್​, ಇಂಜಿನಿಯರಿಂಗ್​ ಟೆಕ್ನಾಲಜಿ, ಬ್ಯಾಚುಲರ್​ ಆಪ್​ಆರ್ಕಿಟೆಕ್ಟರ್​ ಮತ್ತು ಬಿ.ಆರ್ಕ್​, ಎಂ.ಆರ್ಕ್​ ಕೋರ್ಸ್​ಗಳಲ್ಲಿ ಆಯ್ಕೆಯಾದ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಮುಸ್ಲಿಂ, ಜೈನ್​, ಬೌದ್ಧರು, ಸಿಖ್​, ಪಾರ್ಸಿ, ಕ್ರಿಶ್ಚಿಯನ್​ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ಮಾಹಿತಿಗೆ ಜಿಲ್ಲಾ ವ್ಯವಸ್ಥಾಪಕ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಮೌಲಾನಾ ಅಜಾದ್​ ಭವನ, ಇಂದಿರಾ ಕಾಲೇಜು ಮುಂಭಾಗ, ಉಪ್ಪಾರಹಳ್ಳಿ, ತುಮಕೂರು. ಇವರಿಗೆ ಸಲ್ಲಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net