ಟಿವಿ ರಿಪೇರಿ ತರಬೇತಿಗೆ ಅರ್ಜಿ

training-logo-png-transparent
Published on

ತುಮಕೂರು: ರುಡ್​ಸೆಟ್​ ಸಂಸ್ಥೆಯು ಗ್ರಾಮೀಣ ನಿರುದ್ಯೋಗಿ ಯುವಕ-, ಯುವತಿಯರಿಗೆ ಉಚಿತವಾಗಿ 30 ದಿನಗಳ ಟಿವಿ ರಿಪೇರಿ ತರಬೇತಿ ನೀಡಲು ಅರ್ಹರಿಂದ ಅರ್ಜಿ ಆಹ್ವಾನಿಸಿದೆ.

ತರಬೇತಿ ಡಿಸೆಂಬರ್​ 18 ರಿಂದ ಆರಂಭವಾಗಲಿದ್ದು, ಟಿವಿ ಟೆಕ್ನಿಷಿಯನ್​ ತರಬೇತಿಯಲ್ಲಿ ಬೇಸಿಕ್​ನಿಂದ ಅತ್ಯಧಿಕ ತಂತ್ರಜ್ಞಾನದವರೆಗೆ ತರಬೇತಿ ನೀಡಲಾಗುವುದು. ಥಿಯರಿ ಜತೆಯಲ್ಲಿ ಪ್ರಾಕ್ಟಿಕಲ್​ ತರಬೇತಿ ಇದೆ.

ಅರ್ಜಿ ಸಲ್ಲಿಸಲು ನವೆಂಬರ್​ 20 ಕೊನೆಯ ದಿನ , ತರಬೇತಿಯ ಅವಧಿಯಲ್ಲಿ ಉಚಿತ ಊಟ ಮತ್ತು ವಸತಿ ಸೌಲಭ್ಯವಿದ್ದು ತರಬೇತಿ ಪೂರ್ಣಗೊಂಡರೆ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಪ್ರಮಾಣಪತ್ರ ವಿತರಿಸಲಾಗುವುದು.

ಮಾಹಿತಿಗೆ ರುಡ್​ಸೆಟ್​ ಸಂಸ್ಥೆ, ಅರಿಶಿನಕುಂಟೆ, ನೆಲಮಂಗಲ ತಾಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೊ.9380162042, 9740982585 ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net