ಬಾಡಿಗೆ ಕಟ್ಟಡ ಮಾಲೀಕರಿಂದ ಅರ್ಜಿ

CTD HOSTEL-POST METRIC02..-----------
Published on

ತುಮಕೂರು: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್​ ನಂತರ ಇಂಜಿನಿಯರಿಂಗ್​ ಮತ್ತು ಮೆಡಿಕಲ್​ ಬಾಲಕಿಯರ, ಬಾಲಕರ ವಿದ್ಯಾರ್ಥಿ ನಿಲಯಗಳಿಗೆ 2 ಬಾಡಿಗೆ ಕಟ್ಟಡ ಬೇಕಾಗಿದ್ದು, ಆಸಕ್ತ ಕಟ್ಟಡ ಮಾಲೀಕರಿಂದ ಅರ್ಜಿ ಆಹ್ವಾನಿಸಿದೆ.

ಕಟ್ಟಡದಲ್ಲಿ 100-&125 ವಿದ್ಯಾರ್ಥಿಗಳು ವಾಸಿಸಲು ಸುಮಾರು 15 ರಿಂದ 20 ವಾಸದ ಕೊಠಡಿಗಳಿರುವ ಹಾಗೂ ಸ್ನಾನಗೃಹ, ಶೌಚಾಲಯ, ಸ್ವಂತ ಬೋರ್​ವೆಲ್​ ನೀರಿನ ವ್ಯವಸ್ಥೆ ಹಾಗೂ ಇನ್ನಿತರೆ ಮೂಲಭೂತ ಸೌಕರ್ಯವಿರುವ ಕಟ್ಟಡ ಬೇಕಾಗಿದ್ದು, ಲೋಕೋಪಯೋಗಿ ಇಲಾಖೆ ನಿಗಧಿಪಡಿಸುವ ಬಾಡಿಗೆಗೆ ಒಪ್ಪುವ ಕಟ್ಟಡದ ಮಾಲೀಕರು ಅರ್ಜಿ ಸಲ್ಲಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net