

ತುಮಕೂರು: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ(ವಿಆರ್ಡಬ್ಲ್ಯೂ)ರ ತಾತ್ಕಾಲಿಕ ಹುದ್ದೆಗಳನ್ನು ಗೌರವಧನ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಅರ್ಹ ವಿಕಲಚೇತನ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳು ತುಮಕೂರು ಗ್ರಾಮಾಂತರ ತಾಲ್ಲೂಕಿನ ಸೀತಕಲ್ಲು ಗ್ರಾಮ ಪಂಚಾಯತಿ ಹಾಗೂ ಮಧುಗಿರಿ ತಾಲ್ಲೂಕಿನ ಚಿನಕವಜ್ರ ಗ್ರಾಮ ಪಂಚಾಯತಿಗಳಲ್ಲಿ ಖಾಲಿಯಿದ್ದು, ಆಸಕ್ತರು ಅಗತ್ಯ ದಾಖಲೆಗಳೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು ಜೂನ್ 30ರೊಳಗಾಗಿ ಸಂಬಂಧಿಸಿದ ತಾಲೂಕು ಪಂಚಾಯತಿಗಳಿಗೆ ಸಲ್ಲಿಸಬಹುದು.
ಮಾಹಿತಿಗೆ ದೂ.0816- 2252763 ಸಂಪರ್ಕಿಸಿ.