

ತುಮಕೂರು: ಮಹಿಳಾ ಸಬಲೀಕರಣ ಘಟಕದಲ್ಲಿನ ಪ್ರಧಾನಮಂತ್ರಿ ಮಾತೃವಂದನಾ ಯೋಜನೆ ಅನುಷ್ಠಾನಕ್ಕಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರ ಕಚೇರಿಯಲ್ಲಿ ಖಾಲಿಯಿರುವ ಜಿಲ್ಲಾ ಮಟ್ಟದ 1 ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯ ಜಿಲ್ಲಾ ಸಂಯೋಜಕ ಹಾಗೂ 1 ಡಾಟಾ ಎಂಟ್ರಿ ಆಪರೇಟರ್, ಯೋಜನಾ ಸಹಾಯಕರ ಹುದ್ದೆ ಭರ್ತಿ ಮಾಡಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯ ಜಿಲ್ಲಾ ಸಂಯೋಜಕ ಹುದ್ದೆಗೆ ಸಮಾಜವಿಜ್ಞಾನ, ಜೀವವಿಜ್ಞಾನ, ಪೌಷ್ಠಿಕ, ವೈದ್ಯಕಿಯ, ಆರೋಗ್ಯ ನಿರ್ವಹಣೆ, ಸಮಾಜಕಾರ್ಯ, ಗ್ರಾಮೀಣ ನಿರ್ವಹಣೆ ವಿಷಯ ಹಾಗೂ ಡಾಟಾ ಎಂಟ್ರಿ ಆಪರೇಟರ್, ಯೋಜನಾ ಸಹಾಯಕ ಹುದ್ದೆಗೆ ಸಮಾಜವಿಜ್ಞಾನ, ಜೀವವಿಜ್ಞಾನ, ಗ್ರ್ರಾಮೀಣ ನಿರ್ವಹಣೆ, ಸಂಖ್ಯಾಶಾಸ್ತ್ರ ಯಾವುದಾದರೂ ಒಂದು ವಿಷಯದ ಸ್ನಾತಕೋತ್ತರ ಪದವಿ ಪಡೆದಿರಬೇಕು ಹಾಗೂ ಸರ್ಕಾರಿ ಅಥವಾ ಸ್ವಯಂ ಸೇವಾ ಸಂಸ್ಥೆಗಳಲ್ಲಿ ಕನಿಷ್ಟ 1 ವರ್ಷ ಅನುಭವ ಹೊಂದಿರಬೇಕು.
ಮಾತೃವಂದನಾ ಯೋಜನೆಯ ಜಿಲ್ಲಾ ಸಂಯೋಜಕ ಹುದ್ದೆಗೆ ಮಾಹೆಯಾನ 35000 ರೂ. ಹಾಗೂ ಡಾಟಾ ಎಂಟ್ರಿ ಆಪರೇಟರ್ ಯೋಜನಾ ಸಹಾಯಕ ಹುದ್ದೆಗೆ 22000 ರೂ. ಗೌರವಧನ ಪಾವತಿಸಲಾಗುವುದು.
ಆಸಕ್ತ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಯನ್ನು ಸೆಪ್ಟೆಂಬರ್ 16ರೊಳಗಾಗಿ ಸಲ್ಲಿಸಬಹುದಾಗಿದೆ. ಅರ್ಜಿಯೊಂದಿಗೆ ಎಸ್ಎಸ್ಎಲ್ಸಿ ಅಂಕಪಟ್ಟಿ, ನಿಗಧಿಪಡಿಸಿರುವ ವಿದ್ಯಾರ್ಹತೆ ಅಂಕಪಟ್ಟಿ, ಅನುಭವ ಪ್ರಮಾಣ ಪತ್ರ, ಕಂಪ್ಯೂಟರ್ ತರಬೇತಿ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಮತ್ತು ಚಾಲ್ತಿಯಲ್ಲಿರುವ ತಹಸೀಲ್ದಾರ್ರವರಿಂದ ಪಡೆದ ವಾಸಸ್ಥಳ ಪ್ರಮಾಣ ಪತ್ರ ಲಗತ್ತಿಸಬೇಕು.
ಮಾಹಿತಿಗೆ ಉಪನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಕಚೇರಿ ಅಥವಾ ದೂ.0816 -2956624 ಸಂಪರ್ಕಿಸಿ.