ಬಿಲ್​ ಕಲೆಕ್ಟರ್​ ಹುದ್ದೆಗೆ ಅರ್ಜಿ

job 1
Published on

ತುಮಕೂರು: ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೊಳಪಡುವ ತಾಲೂಕಿನ ಶೆಟ್ಟಿಹಳ್ಳಿ ಶ್ರೀಆಂಜನೇಯಸ್ವಾಮಿ ದೇವಾಲಯದಲ್ಲಿ ಖಾಲಿಯಿರುವ ಗ್ರೂಪ್​ "ಸಿ' ವೃಂದದ ಬಿಲ್​ ಕಲೆಕ್ಟರ್​ ಹುದ್ದೆ ನೇಮಕಾತಿ ಮಾಡಿಕೊಳ್ಳಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿದಾರರು ಎಸ್​ಎಸ್​ಎಲ್​ಸಿ ತೇರ್ಗಡೆ ಹೊಂದಿದ್ದು, ಅಧಿಕೃತ ಸಂಸ್ಥೆಯಲ್ಲಿ ಕಂಪ್ಯೂಟರ್​ ಎಂಎಸ್​ ಆಫೀಸ್​, ಎಕ್ಸೆಲ್​ ಪ್ರಮಾಣೀಕೃತ ಅಥವಾ ತತ್ಸಮಾನ ಕನಿಷ್ಠ 3 ತಿಂಗಳ ಕೋರ್ಸ್​ ಪೂರ್ಣಗೊಳಿಸಿರಬೇಕು. ಕನ್ನಡ ಭಾಷೆಯಲ್ಲಿ ಉತ್ತಮವಾಗಿ ಬೆರಳಚ್ಚು ಮಾಡುವ ಅನುಭವ ಹೊಂದಿರಬೇಕು. ಅಭ್ಯರ್ಥಿಯ ವಯಸ್ಸು ಕನಿಷ್ಠ 18 ಗರಿಷ್ಠ 35 ವರ್ಷಗಳಾಗಿರಬೇಕು. ಜನ್ಮ ದಿನಾಂಕಕ್ಕೆ ಸಂಬಂಧಿಸಿದಂತೆ ಶಾಲಾ-ಕಾಲೇಜು ಪ್ರಮಾಣ ಪತ್ರ ಅಥವಾ ಜನನ ಪ್ರಮಾಣ ಪತ್ರ ಸಲ್ಲಿಸಬೇಕು. ಹಿಂದೂ ಧರ್ಮ ಅನುಸರಿಸುವ ವ್ಯಕ್ತಿಯಾಗಿರಬೇಕು.

ಅಭ್ಯರ್ಥಿಗಳು ತಮ್ಮ ಆಧಾರ್​ ಕಾರ್ಡ್​ ನಕಲು ಪ್ರತಿ ಸಲ್ಲಿಸಿ ನಿಗಧಿತ ಅರ್ಜಿ ನಮೂನೆಯನ್ನು ಆಗಸ್ಟ್​ 21ರೊಳಗಾಗಿ ಪಡೆಯತಕ್ಕದ್ದು. ಭರ್ತಿ ಮಾಡಿದ ತಮ್ಮ ಅರ್ಜಿಯೊಂದಿಗೆ ಆಧಾರ್​ ಪ್ರತಿ, ಖಾಯಂ ವಿಳಾಸದ ದಾಖಲೆ, ಇತ್ತೀಚಿನ 2 ಪಾಸ್​ಪೋರ್ಟ್​ ಅಳತೆಯ ಭಾವಚಿತ್ರ ಹಾಗೂ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಆ.28ರೊಳಗಾಗಿ ತುಮಕೂರು ತಾಲೂಕು ತಹಶೀಲ್ದಾರರ ಕಚೇರಿಗೆ ಸಲ್ಲಿಸಬಹುದು.

ಎಂದು ತಹಶೀಲ್ದಾರ್​ ರಾಜೇಶ್ವರಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net