

ತುಮಕೂರು: ಕೈಮಗ್ಗ ಮತ್ತು ಜವಳಿ ಇಲಾಖೆ ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ಕೈಮಗ್ಗ ಸಲಕರಣೆ ಹಾಗೂ ದುಡಿಮೆ ಬಂಡವಾಳಕ್ಕಾಗಿ ವಾಣಿಜ್ಯ ಬ್ಯಾಂಕ್ಗಳಿಂದ ಪಡೆಯುವ ಸಾಲದ ಮೇಲೆ ಶೇ.20ರಷ್ಟು ಅಥವಾ ಗರಿಷ್ಠ 25000 ರೂ.ಗಳವರೆಗೆ ಮಾರ್ಜಿನ್ ಮನಿ ನೀಡಲು ಜಿಲ್ಲೆಯ ಕೈಮಗ್ಗ ನೇಕಾರರಿಂದ ಅರ್ಜಿ ಆಹ್ವಾನಿಸಿದೆ.
ವೃತ್ತಿಯಲ್ಲಿ ತೊಡಗಿರುವ ಆಸಕ್ತ ಕೈಮಗ್ಗ ನೇಕಾರರು ಭರ್ತಿ ಮಾಡಿದ ಅರ್ಜಿಯೊಂದಿಗೆ ನೇಕಾರರ ಗುರುತಿನ ಚೀಟಿ ಅಥವಾ ಆರೋಗ್ಯ ವಿಮಾ ಕಾರ್ಡ್, ಆಧಾರ್ ಕಾರ್ಡ್, ಪಾನ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ಪಡಿತರ ಚೀಟಿ, ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿಯನ್ನು ಲಗತ್ತಿಸಿ ಉಪ ನಿರ್ದೇಶಕರ ಕಚೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ, 5ನೇ ಮುಖ್ಯರಸ್ತೆ, ಸಿದ್ದಗಂಗಾ ಬಡಾವಣೆ, ತುಮಕೂರು. ಇವರಿಗೆ ಸಲ್ಲಿಸಬೇಕು.
ಮಾಹಿತಿಗೆ ದೂ.0816 -2275370 ಸಂಪರ್ಕಿಸಿ.