ಶಿರಾ ಸರ್ಕಾರಿ ಪಾಲಿಟೆಕ್ನಿಕ್​ನಲ್ಲಿ ಅರ್ಜಿ

application
Published on

ತುಮಕೂರು: ಶಿರಾ ಸರ್ಕಾರಿ ಪಾಲಿಟೆಕ್ನಿಕ್​ ಸಂಸ್ಥೆಯಲ್ಲಿ ಭರ್ತಿಯಾಗದ ಪ್ರಥಮ ಡಿಪ್ಲೋಮಾ ಕೋರ್ಸ್​ಗಳಾದ ಫುಡ್​ ಪ್ರೋಸೆಸಿಂಗ್​ ಅಂಡ್​ ಪ್ರಿಸರ್ವೇಷನ್​ ಹಾಗೂ ಸಿವಿಲ್​ ವಿಭಾಗದ ಉಳಿದ ಸೀಟುಗಳಿಗೆ 2025-&26ನೇ ಶೈಕ್ಷಣಿಕ ಸಾಲಿಗಾಗಿ ಆಫ್​ ಲೈನ್​ ಮೂಲಕ ಪ್ರಾಂಶುಪಾಲರ ಹಂತದಲ್ಲಿಯೇ ನೇರ ಪ್ರವೇಶ ಕಲ್ಪಿಸಲು ಅರ್ಜಿ ಆಹ್ವಾನಿಸಲಾಗಿದೆ.

ಪ್ರವೇಶ ಪಡೆಯಲು ಇಚ್ಛಿಸುವ ವಿದ್ಯಾರ್ಥಿಗಳು ಎಸ್​ಎಸ್​ಎಲ್​ಸಿ ಅಂಕಪಟ್ಟಿ, ವರ್ಗಾವಣೆ ಪ್ರಮಾಣ ಪತ್ರ, ಎನ್​ಒಸಿ, 5 ವರ್ಷದ ವ್ಯಾಸಂಗ ಪ್ರಮಾಣ ಪತ್ರ(ಕ್ಷೇತ್ರ ಶಿಕ್ಷಣಾಧಿಕಾರಿಗಳವರ ದೃಢೀಕರಿಸಿದ ಸಹಿಯೊಂದಿಗೆ), ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವೈದ್ಯಕಿಯ ಪ್ರಮಾಣ ಪತ್ರ, ಆಧಾರ್​ ಕಾರ್ಡ್​ ಮತ್ತು 8 ಭಾವಚಿತ್ರಗಳೊಂದಿಗೆ ಜೂನ್​ 30ರೊಳಗಾಗಿ ಪ್ರವೇಶ ಪಡೆಯಲು ತಿಳಿಸಲಾಗಿದೆ.

ಮಾಹಿತಿಗೆ ಮೊ.9448607874, 9448643882 ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net