ಹಮಾರೆ ಬಾರಾಹ್ ಸಿನಿಮಾ ನಿಷೇಧ

film1111
Published on

ತುಮಕೂರು: ಸರ್ಕಾರದ ಆದೇಶದಂತೆ ಹಮಾರೆ ಬಾರಾಹ್ ಎಂಬ ಟ್ರೆÊಲರ್ ಹಾಗೂ ಸಿನಿಮಾವನ್ನು ಪ್ರಸಾರ ಮಾಡಬಾರದು ಎಂದು ಜಿಲ್ಲಾಧಿಕಾರಿ ಶುಭಕಲ್ಯಾಣ್ ಮನವಿ ಮಾಡಿದ್ದಾರೆ.

ಜೂ.7ರಂದು ಬಿಡುಗಡೆಯಾಗಲಿರುವ ಹಮಾರೆ ಬಾರಾಹ್ ಎಂಬ ವಿವಾದಾತ್ಮಕ ಸಿನಿಮಾ ಬಿಡುಗಡೆ ಮಾಡುವುದನ್ನು ಕರ್ನಾಟಕ ಸಿನಿಮಾ(ರೆಗ್ಯೂಲೇಶನ್) ಆಕ್ಟ್-1964ರ ಸೆಕ್ಷನ್-15(1) ಮತ್ತು 15(5)ರಡಿಯಲ್ಲಿ ನಿಷೇಧಿಸಿದೆ.

ಹಮಾರೆ ಬಾರಾಹ್ ಎಂಬ ಟ್ರೆÊಲರ್ ಹಾಗೂ ಸಿನಿಮಾ ಜೂ.5, 2024 ರಿಂದ ಅನ್ವಯವಾಗುವಂತೆ ಎರಡು ವಾರಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ರಾಜ್ಯದ ಯಾವುದೇ ಎಲೆಕ್ಟಾçನಿಕ್ ಮಾಧ್ಯಮ, ಸಾಮಾಜಿಕ ಜಾಲತಾಣ, ಸಿನಿಮಾ ಮಂದಿರಗಳು, ಖಾಸಗಿ ಟಿವಿ ಚಾಲನ್‌ಗಳು, ಇತರೆ ಮಾಧ್ಯಮಗಳ ಮೂಲಕ ಪ್ರಸಾರ ಮಾಡುವುದನ್ನು ರಾಜ್ಯದಲ್ಲಿ ನಿಷೇಧಿಸಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net