

ತುಮಕೂರು: ತೆಂಗು ಬೆಳೆಗಾರರು ಸೇರಿದಂತೆ ನಿತ್ಯ ದುಡಿಯುವ ರೈತರು ಸಂಕಷ್ಟದಲ್ಲಿದ್ದರೂ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ನೆರವಿಗೆ ಬಾರದಿರುವುದು ಖಂಡನೀಯ ಎಂದು ಪರಿಸರವಾದಿ ಸಿ.ಯತಿರಾಜು ಹರಿಹಾಯ್ದರು.
ಅಖಿಲ ಭಾರತ ರೈತ-ಕೃಷಿ ಕಾರ್ಮಿಕ ಸಂಘಟನೆ(ಎಐಕೆಕೆಎAಎಸ್) ವತಿಯಿಂದ ಆಯೋಜಿಸಿದ್ದ ರೈತ ಕೃಷಿ-ಕಾರ್ಮಿಕರ ಜಿಲ್ಲಾ ಸಮಾವೇಶದಲ್ಲಿ ನಗರದ ಬಿಜಿಎಸ್ ವೃತ್ತದಿಂದ ಮೆರವಣಿಗೆಯಲ್ಲಿ ಆಗಮಿಸಿ ಕನ್ನಡಭವನದಲ್ಲಿ ಜನರನ್ನು ಉz್ದೆÃಶಿಸಿ ಮತನಾಡಿದರು.
ಸರ್ಕಾರಗಳ ಜನ ವಿರೋಧಿ ಕೃಷಿ, ಕಾರ್ಮಿಕ ನೀತಿಗಳಿಂದ ದೇಶದೆಲ್ಲೆಡೆ ರೈತರು ಬೆಳೆದ ಬೆಲೆ ಇಲ್ಲದೆ, ಕಾರ್ಮಿಕರು ಉದ್ಯೋಗವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ ಆದರೆ, ಆಳುವ ಸರ್ಕಾರಗಳಿಗೆ ಇದರ ಬಗ್ಗೆ ಯಾವುದೇ ಚಿಂತೆಯಿಲ್ಲ ಎಂದರು.
ಕೃಷಿಕರು, ಕೃಷಿ ಕಾರ್ಮಿಕರು ಹಾಗೂ ಕೈಗಾರಿಕೆಗಳಲ್ಲಿ ದುಡಿಯುವ ಕಾರ್ಮಿಕರು ಸಂಘಟಿತರಾಗಿ ಸರ್ಕಾರಗಳ ವಿರುದ್ಧ ಬೀದಿಗಳಿದು ಹೋರಾಟ ಮಾಡಿಯಾದರೂ ಹಕ್ಕುಗಳನ್ನು ಪಡೆಯುವಂತಾಗಬೇಕು ಎಂದರು.
ಸಮಾವೇಶದಲ್ಲಿ ಅಖಿಲ ಭಾರತ ರೈತ-ಕೃಷಿ ಕಾರ್ಮಿಕ ಸಂಘಟನೆ ರಾಜ್ಯಾಧ್ಯಕ್ಷ ಎಚ್.ವಿ.ದಿವಾಕರ್, ಜಿಲ್ಲಾ ಸಂಚಾಲಕ ಎಸ್.ಎನ್.ಸ್ವಾಮಿ, ಮುಖಂಡರಾದ ರಂಗಧಾಮಯ್ಯ, ನಾಗರಾಜು, ಚೇತನ್, ಪ್ರಶಾಂತ್, ಪ್ರಸನ್ನಕುಮಾರ ಮತ್ತಿತರರು ಇದ್ದರು.