ಏಡ್ಸ್​ ಜಾಗೃತಿ ಜಾಥಾ

Aids Day
Published on

ತುಮಕೂರು: ವಿಶ್ವ ಏಡ್ಸ್​ ದಿನದ ಅಂಗವಾಗಿ ಜಿಲ್ಲಾ ಏಡ್ಸ್​ ನಿಯಂತ್ರಣ ಘಟಕದ ವತಿಯಿಂದ ಡಿ.6ರಂದು ಬೆಳಗ್ಗೆ 9ಕ್ಕೆ ನಗರದ ಜಿಲ್ಲಾಆಸ್ಪತ್ರೆ ಆವರಣದಿಂದ ಬಿಜಿಎಸ್​ ವೃತ್ತ, ಅಶೋಕ ರಸ್ತೆ ಮಾರ್ಗವಾಗಿ ಚರ್ಚ್​ ಸರ್ಕಲ್​, ಕೋಟೆ ಆಂಜನೇಯ ಸ್ವಾಮಿ ಸರ್ಕಲ್​ ಮೂಲಕ ಜಿಲ್ಲಾ ಏಡ್ಸ್​ ನಿಯಂತ್ರಣಾಧಿಕಾರಿ ಕಚೇರಿವರೆಗೆ ಜಾಗೃತಿ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಜಾಥಾ ಕಾರ್ಯಕ್ರಮದಲ್ಲಿ ಬಸ್​ನಿಲ್ದಾಣ, ಮಾರುಕಟ್ಟೆ, ರೈಲ್ವೆ ನಿಲ್ದಾಣಗಳಲ್ಲಿ ಏಡ್ಸ್​ ನಿಯಂತ್ರಣದ ಬಗ್ಗೆ ಅರಿವು ಮೂಡಿಸಲು ಕರಪತ್ರ ಹಂಚಲಾಗುತ್ತಿದೆ. ಸಂಜೆ 6ಕ್ಕೆ ನಗರದ ಡಿ.ದೇವರಾಜು ಅರಸು ಬಸ್​ ನಿಲ್ದಾಣದಲ್ಲಿ ಕ್ಯಾಡಲ್​ ಲೈಟ್​ ಪ್ರದರ್ಶನ ಏರ್ಪಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net