ಕೃಷಿ ಪಂಪ್​ಸೆಟ್​ ಸೌಲಭ್ಯ

PumpSet
Published on

ತುಮಕೂರು: ಗುಬ್ಬಿ ಬೆಸ್ಕಾಂ ಉಪವಿಭಾಗ ವ್ಯಾಪ್ತಿಯಲ್ಲಿ ಅಕ್ರಮ-ಸಕ್ರಮ ಯೋಜನೆಯಡಿ ರೈತರಿಗೆ ಕೃಷಿ ಪಂಪ್​ಸೆಟ್​ಗಳಿಗೆ ಉಚಿತ ವಿದ್ಯುತ್​ ಪರಿವರ್ತಕಗಳನ್ನು ಅಳವಡಿಸಲು ಉದ್ದೇಶಿಸಲಾಗಿದೆ.

ಗ್ರಾಹಕರು ಅಕ್ರಮ-, ಸಕ್ರಮ ಯೋಜನೆಯಡಿ 2015 ರಿಂದ 2022ರ ಮಾರ್ಚ್​ವರೆಗೆ ಹಣ ಪಾವತಿಸಿರುವ ರೈತರಿಗೆ ಸೌಲಭ್ಯ ವಿತರಣೆಗೆ ಸ್ಥಳ ಪರಿಶೀಲನೆಗೆ ಸಂಬಂಧಿಸಿದ ಶಾಖಾಧಿಕಾರಿ ಭೇಟಿ ನೀಡಲಿದ್ದು, ಭೇಟಿ ಸಂದರ್ಭದಲ್ಲಿ ಹಣ ಪಾವತಿಸಿದ ಆರ್​ಆರ್​ ನಂಬರ್​ಗಳ ಸ್ಥಾವರಗಳ ಸ್ಥಳ ಪರಿಶೀಲನೆ ಹಾಗೂ ಅಂದಾಜು ಪಟ್ಟಿ ತಯಾರಿಕೆಗೆ ಸಹಕರಿಸಬೇಕು.

ಹೆಚ್ಚಿನ ಮಾಹಿತಿಗೆ ಗುಬ್ಬಿ ಶಾಖೆ ಮೊ.9449844214-47, ಚೇಳೂರು 9449844223 ಮತ್ತು ಸಿ.ಎಸ್​.ಪುರ 9449844232 ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net