

ತುಮಕೂರು: ಮಾವು ಹೂ ಮತ್ತು ಕಾಯಿ ಕಟ್ಟುವ ಸಮಯದಲ್ಲಿ ಮಾವು ಬೆಳೆಗಾರರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ತೋಟಗಾರಿಕಾ ಇಲಾಖೆ ಸಲಹೆ ನೀಡಿದೆ.
ಮಾವಿನಲ್ಲಿ ರೋಗ ಮತ್ತು ಕೀಟ ಬಾಧೆಯನ್ನು ತಡೆಗಟ್ಟಲು ಮಾವಿನ ತೋಟಗಳನ್ನು ಸ್ವಚ್ಚವಾಗಿ ಇಡಬೇಕು. ಮಾವಿನ ಗಿಡಗಳ ಬುಡದಲ್ಲಿ ಕಳೆಗಳನ್ನು ತೆಗೆಯಬೇಕು.
ಹೂವು ಉದುರುವುದನ್ನು ತಡೆಗಟ್ಟಲು ಹೂವಿನ ಪ್ರಾರಂಭದ ಹಂತದಲ್ಲಿ ಪ್ರತಿ 25 ದಿನಕ್ಕೊಮ್ಮೆ ಪೊಟ್ಯಾಶಿಯಂ ನೈಟ್ರೇಟ್ (ಏಓಔ3) 5 ಗ್ರಾಂ ಔಫಿಧಿಯನ್ನು 1 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಮಾವಿನ ಗಿಡದಲ್ಲಿ ಹೂ ಚೆನ್ನಾಗಿ ಕಚ್ಚಲು ಸಸ್ಯ ಪ್ರಚೋದಕ 4 ಮಿಲೀ ಔಷಧವನ್ನು 16 ಲೀ. ನೀರಿನಲ್ಲಿ ಬೆರೆಸಿ 15 ದಿನಗಳ ಅಂತರದಲ್ಲಿ 2 ಬಾರಿ ಸಿಂಪಡಿಸಬೇಕು. ಹೂವು ಮತ್ತು ಕಾಯಿ ಉದುರುವುದನ್ನು ತಡೆಗಟ್ಟಲು ಮಾವಿನ ಸ್ಪೆಫಿಲ್-05 ಗ್ರಾಂ ಔಫಿಧಿಯನ್ನು 1 ಲೀ. ನೀರಿನಲ್ಲಿ ಮಿಶ್ರಣ ಮಾಡಿ 25 ದಿನಕ್ಕೊಮ್ಮೆ 3 ಬಾರಿ ಸಿಂಪಡಣೆ ಮಾಡಬೇಕು.