

ತುಮಕೂರು: ನಗರದ ಹೊರವಲಯದ ಊರುಕೆರೆ ಸಮೀಪ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಶನಿವಾರ ಬಗ್ಗೆ ಸಂಭವಿಸಿರುವ ಲಾರಿ ಹಾಗೂ ಕ್ಯಾಂಟರ್ ಮುಖಾಮುಖಿಯಲ್ಲಿ ಇಬ್ಬರು ಸ್ಥಳದಲ್ಲಿಯೇ ಮೃತರಾಗಿದ್ದಾರೆ.
ಈರುಳ್ಳಿ ಮಾರಲು ಕ್ಯಾಂಟರ್‌ನಲ್ಲಿ ತುಮಕೂರಿಗೆ ಆಗಮಿಸುತ್ತಿದ್ದು ಚಿತ್ರದುರ್ಗ ಜಿಲ್ಲೆ ಮೊಳಕಾನ್ಮೂರು ತಾಲೂಕು ಬೆಲ್ಲದಾರಹಟ್ಟಿ ಗ್ರಾಪಂ ಸದಸ್ಯ ಮುನಿಸ್ವಾಮಿ(52) ಹಾಗೂ ಚಾಲಕ ರಾಕೇಶ್(35) ಮೃತರು.
ಮುನಿಸ್ವಾಮಿ ಜಮೀನಿನಲ್ಲಿ ಬೆಳೆದಿದ್ದ ಈರುಳ್ಳಿಯನ್ನು ಬೆಂಗಳೂರಿನ ಮಾರುಕಟ್ಟೆ ತೆಗದುಕೊಂಡು ಹೋಗುತ್ತಿದ್ದರು ಎನ್ನಲಾಗಿದ್ದು ಮುಂಭಾಗದಲ್ಲಿ ಚಲಿಸುತತಿದ್ದ ಕಾರಿಗೆ ಹಿಂಭಾಗದಿಂದ ಬಂದು ಡಿಕ್ಕಿಹೊಡೆದಿದೆ.
ತುಮಕೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.