ಆಂಬುಲೆನ್ಸ್ ಟಯರ್ ಸ್ಫೋಟಗೊಂಡು ಬೈಕ್ ಸವಾರ ಸಾವು

18TMK_Accident_Manju-163x3001
Published on

ತುಮಕೂರು: ರಸ್ತೆಯಲ್ಲಿ ಸಂಚರಿಸುತ್ತಿದ್ದ ಆಂಬುಲೆನ್ಸ್ ಟಯರ್ ಸ್ಫೋಟಗೊಂಡು ಪಕ್ಕದಲ್ಲಿ ಚಲಿಸುತ್ತಿದ್ದ ಬೈಕ್‌ಗೆ ದ್ವಿಚಕ್ರವಾಹನಕ್ಕೆ ಡಿಕ್ಕಿಯಾಗಿ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ತುಮಕೂರು-ಕೊರಟಗೆರೆ ರಸ್ತೆಯ ಗೇರಹಳ್ಳಿ ಬಳಿ ಸಂಭವಿಸಿದೆ.

ಕೊರಟಗೆರೆ ಪಟ್ಟಣದಲ್ಲಿ ಸ್ಟುಡಿಯೋ ಹೊಂದಿದ್ದ ಬೈಕ್ ಸವಾರ ಮಂಜುನಾಥ(38) ಮೃತ. ಹಿಂಬದಿ ಸವಾರ ರವಿ ಎಂಬಾತನೂ ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಆಂಬುಲೆನ್ಸ್ ಟಯರ್ ಸ್ಫೋಟಗೊಂಡ ರಭಸಕ್ಕೆ ಬೈಕ್ ಸವಾರ ನಿಯಂತ್ರಣ ಕಳೆದುಕೊಂಡಿದ್ದು ರಸ್ತೆಯ ಪಕ್ಕದಲ್ಲಿದ್ದ ಕಲ್ಲಿನ ಮೇಲೆ ಬಿದ್ದು ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ. ಕೋರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net