ಆಟೋ, ಮಾರುತಿ ಕಾರು ಡಿಕ್ಕಿ; ಸ್ಥಳದಲ್ಲಿಯೇ ವ್ಯಕ್ತಿ ಸಾವು

Acc
Published on

ತುಮಕೂರು: ಆಟೋ ಮತ್ತು ಮಾರುತಿ ಕಾರು ನಡುವೆ ಅಫಘಾತ ಸಂಭವಿಸಿದ್ದು ಆಟೋದಲ್ಲಿದ್ದ ಒಬ್ಬ ವ್ಯಕ್ತಿ ಸ್ಥಳದಲ್ಲಿಯೇ ಮೃತರಾಗಿ ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುಬ್ಬಿ ತಾಲೂಕು ಹರಿವೇಸಂದ್ರದ ಬಳಿ ಇಂದು ಸಂಭವಿಸಿದೆ.

ಕಲ್ಲೂರು ನಾಗರಾಜ್(60) ಮೃತರು. ಆಟೋದಲ್ಲಿ ಕೆ.ಜಿ.ಟೆಂಪಲï ಕಡೆ ತೆರಳುತ್ತಿದ್ದ ದಂಪತಿ ಹಾಗೂ ಕೆ.ಜಿ.ಟೆಂಪಲï ಸಂತೆಗೆ ವ್ಯಾಪಾರಕ್ಕೆಂದು ತೆರಳುತ್ತಿದ್ದ ಮತ್ತೊಂದು ದಂಪತಿ ಆಟೋದಲ್ಲಿ ಪ್ರಯಾಣಿಸುತ್ತಿದ್ದರು.

ಸಿ.ಎಸ್.ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net