

ತುಮಕೂರು: ಬೆಳ್ಳಬೆಳಗ್ಗೆ ಉದ್ಯೋಗಕ್ಕೆ ಹೊರಟಿದ್ದ ಗಾರ್ಮೆಂಟ್ಸ್ ನೌಕರರು ತುಂಬಿದ್ದ ಆಟೋ ಹಾಗೂ ಕೆಎಸ್‌ಆರ್‌ಆರ್‌ಟಿಸಿ ಬಸ್ ಮುಖಾಮುಖಿಯಾಗಿ ಆಟೋದಲ್ಲಿದ್ದ ಓರ್ವ ಯುವತಿ ಮೃತಪಟ್ಟು 10 ಮಹಿಳಾ ಉದ್ಯೋಗಿಗಳು ಗಾಯಗೊಂಡಿರುವ ಘಟನೆ ಮಂಗಳವಾರ ನಡೆದಿದೆ.
ಮಧುಗಿರಿ ತಾಲೂಕಿನ ಕೊಡಿಗೇನಗಳ್ಳಿ- ಗುಟ್ಟೆ ಬಳಿಯ ಜಯಮಂಗಳಿ ನದಿ ಸೇತುವೆ ಬಳಿ ಅಪಘಾತ ಸಂಭವಿಸಿದ್ದು, ಮೃತ ಯುವತಿ ಜೋಗೇನಹಳ್ಳಿ ವಾಸಿ ಲಕ್ಷ್ಮೀ( 20) ಎಂದು ಗುರುತಿಸಲಾಗಿದೆ.
ಗಂಭೀರವಾಗಿ ಗಾಯಗೊಂಡ 8 ಮಹಿಳೆಯರನ್ನುಜಿಲ್ಲಾಸ್ಪತ್ರೆಗೆ ಕಳಿಸಲಾಗಿದೆ.