

ತುಮಕೂರು: ಕರ್ನಾಟಕ ಸಾಹಿತ್ಯ ಅಕಾಡೆಮಿಯು ಕರ್ನಾಟಕ ಸಂಭ್ರಮ-&50ರ ಅಭಿಯಾನದ ಅಂಗವಾಗಿ ಬೆಂಗಳೂರು, ಮೈಸೂರು, ಬೆಳಗಾವಿ ಹಾಗೂ ಕಲಬುರಗಿ ವಿಭಾಗಗಳಲ್ಲಿ ವಿಭಾಗವಾರು ಯುವಕವಿ ಗೋಷ್ಠಿಯನ್ನು ಆಯೋಜಿಸಲಾಗಿದ್ದು, ಆಸಕ್ತ 20 ರಿಂದ 40 ವರ್ಷ ವಯಸ್ಸಿನ ಯುವಕವಿಗಳಿಂದ ಕವಿತೆಗಳನ್ನು ಆಹ್ವಾನಿಸಿದೆ.
ರಾಜ್ಯದ ಎಲ್ಲಾ ಭಾಗದ ಆಸಕ್ತ ಕವಿಗಳು ಕನಿಷ್ಠ 3 ಕವಿತೆಗಳನ್ನು ಅಕ್ಟೋಬರ್ 30ರೊಳಗಾಗಿ ಕಳುಹಿಸಿಕೊಡಬೇಕು. ಕವಿತೆಗಳನ್ನು ಸಲ್ಲಿಸುವಾಗ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಜಾಲತಾಣ http://karnatakasahithyaacademy.org ನಿಂದ ಮಾಹಿತಿ ಪಡೆಯಬಹುದು.