ಪರಮ್ ಕ್ಷೇತ್ರದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಗೈರು!

Parameshwar- Siddaramaiah
Published on

ತುಮಕೂರು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಗವಹಿಸಿದ್ದ ಕೊರಟಗೆರೆ ಕ್ಷೇತ್ರದ ಕಾಯಕ್ರಮದಲ್ಲಿ ವಿಪಕ್ಷ ನಾಯಕ ಸಿದ್ಧರಾಮಯ್ಯ ಗೈರು ಹಾಜರಿ ಬಗ್ಗೆ ಜಿಲ್ಲಾ ಕಾಂಗ್ರೆಸ್‌ನಲ್ಲಿ ಗುಸುಗುಸು ಕೇಳಿಬಂತು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಿಡಬ್ಲೂÈಸಿ ಸದಸ್ಯ ಕೆ.ಎಚ್.ಮುನಿಯಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಸೇರಿ ಪಕ್ಷದ ಪ್ರಮುಖ ನಾಯಕರು ಭಾಗವಹಿಸಿ ಚುನಾವಣೆ ಪೂರ್ವದಲ್ಲಿ ಡಾ.ಜಿ.ಪರಮೇಶ್ವರ್ ಅವರಿಗೆ ಬಲ ನೀಡಿದರು.

ಆದರೆ, 2013ರಲ್ಲಿ ಪರಮೇಶ್ವರ್ ಸೋಲಿಗೆ ಸಿದ್ಧರಾಮಯ್ಯ ಕಾರಣ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿರುವ ನಡುವೆಯೂ ಸಿದ್ಧರಾಮಯ್ಯ ಗೈರು ಹಾಜರಾಗಿದ್ದು ನೆರೆದಿದ್ದವರ ಚರ್ಚೆ ವಿಷಯವಾಗಿತ್ತು.

ಅರಸೀಕೆರೆ ಕ್ಷೇತ್ರದಲ್ಲಿ ನಡೆದಿದ್ದ ಧಾರ್ಮಿಕ ಸಮಾರಂಭದಲ್ಲಿ ಭಾಗವಹಿಸುವ ಸಲುವಾಗಿ ಸಿದ್ದರಾಮಯ್ಯ ಕೊರಟಗೆರೆ ಬಂದಿಲ್ಲ ಎಂದು ಪರಮ್ ಆಪ್ತರು ಸ್ಪಷ್ಟನೆ ನೀಡಿದರಾದರೂ ರಾಜಕೀಯ ವಲಯದ ವಿಶ್ಲೇಷಣೆಗಳು ಮಾತ್ರ ತರಹೇವಾರಿಯಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net