

ತುಮಕೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅತಿಥಿ ಉಪನ್ಯಾಸಕರ ಅನಿರ್ಧಾಷ್ಟಾವಧಿ ಧರಣಿ ಮೂರನೇ ದಿನ ಪೂರ್ಣಗೊಳಿಸಿದ್ದು ಸೋಮವಾರದಿಂದ ವಿದ್ಯಾರ್ಥಿಗಳೂ ಪ್ರತಿಭಟನೆ ಬೆಂಬಲಿಸುವ ಸಾಧ್ಯತೆಯಿದೆ.
ಜಿಲ್ಲೆಯ ಎಲ್ಲಾ ಕಾಲೇಜುಗಳಲ್ಲಿಯೂ ತರಗತಿಗಳನ್ನು ಬಹಿಷ್ಕರಿಸಿ ಶನಿವಾರವೂ ಪ್ರತಿಭಟನೆ ಮುಂದುವರೆಸಿರುವ ನೂರಾರು ಅತಿಥಿ ಉಪನ್ಯಾಸಕರು ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ಕುಳಿತಿದ್ದಾರೆ.
ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಡಾ.ಧರ್ಮವೀರ, ಅರೆಕಾಲಿಕ, ಅತಿಥಿ, ಬಾಡಿಗೆ ಮುಂತಾದ ಅವೈಜ್ಙಾನಿಕ ಹೆಸರಿಗಳಿಂದ ನಮ್ಮನ್ನು ಶೋಷಿತರನ್ನಾಗಿ ಮಾಡಿ, ಎರಡು ದಶಗಕಳಿಂದಲೂ ದುಡಿಸಿಕೊಂಡು ಬಂದಿರುವ ರಾಜ್ಯಸರ್ಕಾರಗಳು ಇನ್ನಾದರೂ ನಮ್ಮ ನ್ಯಾಯಸಮ್ಮತ ಬೇಡಿಕೆ ಬಗ್ಗೆ ಗಮನಹರಿಸಲಿ ಎಂದರು.
ನಮ್ಮ ಹೋರಾಟವನ್ನು ಬೆಂಬಲಿಸಿ ಎಲ್ಲಾ ಕಾಲೇಜುಗಳಿಂದಲೂ ವಿದ್ಯಾರ್ಥಿಗಳು ಕಾಲೇಜು ತೊರೆದು ಪ್ರತಿಭನೆಗಳಲ್ಲಿ ಭಾಗಹಿಸುವ ಸಧ್ಯತೆಯಿದ್ದು ಸರ್ಕಾರ ಹೋರಾಟವನ್ನು ನಿರ್ಲಕ್ಷÈ ಮಾಡದೆ ಕೂಡಲೇ ಬೇಡಿಕೆ ಈಡೇರಿಸಬೇಕು ಎಂದು ಅತಿಥಿ ಉಪನ್ಯಾಸಕ ಶಶಿಧರ್ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಅತಿಥಿ ಉಪನ್ಯಾಕರುಗಳಾದ ಸಂಘದ ಕಾರ್ಯಾಧ್ಯಕ್ಷ ಡಾ.ಶಿವಣ್ಣ ತಿಮ್ಮಲಾಪುರ, ಖಜಾಂಚಿ ಕಾಂತರಾಜು, ಡಾ.ಮಲ್ಲಕಾರ್ಜುನ್ , ಟಿ.ಸುರೇಶ್, ಡಾ.ಸವಿತ, ನವೀನ್ ಕುಮಾರ್, ಶಂಕರಪ್ಪ, ಭರತ್, ಸಿ.ಎಸ್‌ರಘು, ನಾಗೇಂದ್ರಕುಮಾರ್, ಡಾ.ಹನುಮಂತರಾಯಪ್ಪ, ವಿಶ್ವನಾಥ್, ಹರ್ಷ, ಕಾಂತರಾಜು, ಮನು, ಚೇತನ್, ಶಶಿ, ಎಸ್.ಆರ್.ಶುಭ ಮತ್ತಿತರರು ಇದ್ದರು.