ಆಟಿ ತಿಂಗಳ ಆಹಾರ ದೇಹಕ್ಕೆ ಪೂರಕ: ವಸಂತ್‌ಕುಮಾರ್ ಅಭಿಮತ

bel_Aatidonji dina
Published on

ವಿಜಯವಾಣಿ ಸುದ್ದಿಜಾಲ ಕಾರ್ಕಳ: ಹಿರಿಯರ ಕಷ್ಟದ ದಿನಗಳು ಇಂದು ಆಚರಣೆಯಾಗಿ ಬದಲಾಗಿದೆ. ಆಟಿ ತಿಂಗಳಲ್ಲಿ ಸೇವಿಸುವ ಪ್ರತಿಯೊಂದು ಆಹಾರ ತಿನಿಸುಗಳು ನಮ್ಮ ದೇಹಕ್ಕೆ ಪ್ರಯೋಜನಕಾರಿ ಎಂದು ಕೃಷಿಕ, ಕಲಾವಿದ ವಸಂತ್‌ಕುಮಾರ್ ನಂದಳಿಕೆ ಹೇಳಿದರು.

ಬೆಳ್ಮಣ್ ಜೇಸಿಐ, ಯುವ ಜೇಸಿ ವಿಭಾಗ ಮತ್ತು ಮಹಿಳಾ ಜೇಸಿ ವಿಭಾಗ ವತಿಯಿಂದ ನಂದಳಿಕೆ ಬೋರ್ಡ್ ಶಾಲಾ ಸಭಾಂಗಣದಲ್ಲಿ ಶನಿವಾರ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜೆಸಿಐ ವಲಯಾಧ್ಯಕ್ಷ ಗಿರೀಶ್ ಎಸ್.ಪಿ ಉದ್ಘಾಟಿಸಿದರು. ಜೆಸಿಐ ವಲಯದ ಪ್ರಥಮ ಮಹಿಳೆ ರಾಜೇಶ್ವರಿ ಗಿರೀಶ್, ನಂದಳಿಕೆ ಸರ್ಕಾರಿ ಪ್ರಾಥಮಿಕ ಶಾಲೆ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ವೀಣಾ ಹರೀಶ್ ಪೂಜಾರಿ, ನಿಕಟ ಪೂರ್ವಾಧ್ಯಕ್ಷ ಸತೀಶ್ ಪೂಜಾರಿ, ಕಾರ್ಯಕ್ರಮ ನಿರ್ದೇಶಕಿ ಅನ್ನಪೂರ್ಣ ಕಾಮತ್, ಮಹಿಳಾ ಜೇಸಿ ಸಂಯೋಜಕಿ ಶ್ವೇತಾ ಆಚಾರ್ಯ, ಯುವ ಜೇಸಿ ಅಧ್ಯಕ್ಷೆ ಪೂರ್ವಿ ರಾವ್ ಉಪಸ್ಥಿತರಿದ್ದರು. ಸಂಜೀವ ಪೂಜಾರಿ ಸ್ವಾಗತಿಸಿದರು. ಕಾರ್ಯದರ್ಶಿ ಸೌಜನ್ಯಾ ಕೋಟ್ಯಾನ್ ವಂದಿಸಿದರು. ವೀಣೇಶ್ ಅಮೀನ್ ಸನ್ಮಾನಪತ್ರ ವಾಚಿಸಿದರು. ಅಬ್ಬನಡ್ಕ ಸಂದೀಪ್ ವಿ. ಪೂಜಾರಿ ಸಹಕರಿಸಿದರು.

ಪ್ರಶಸ್ತಿ ಪ್ರದಾನ, ಸನ್ಮಾನ

ಯುವ ಕೃಷಿಕ ಬೀರೊಟ್ಟು ದಿನೇಶ್ ಪೂಜಾರಿ ಅವರಿಗೆ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ವ್ಯವಹಾರ ಹಾಗೂ ಅಭಿವೃದ್ಧಿ ವಿಭಾಗ ನಿರ್ದೇಶಕ ಸತ್ಯನಾರಾಯಣ ಭಟ್ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net