

ಬೈಂದೂರು: ಕಾಲ್ತೋಡು ಶ್ರೀ ಮಹಾಲಸಾ ಮಾರಿಕಾಂಬಾ ದೇವಸ್ಥಾನದಲ್ಲಿ ಅಕ್ಟೋಬರ್ 3ರಿಂದ ಪ್ರಾರಂಭವಾಗಿದ್ದ ಮಹಾನವರಾತ್ರಿ ಉತ್ಸವ ಶನಿವಾರ ಕೊನೆಗೊಂಡಿತು. ಪ್ರಧಾನ ಅರ್ಚಕ ರಾಮಯ್ಯ ನೇತೃತ್ವದಲ್ಲಿ ನಿತ್ಯವೂ ಚಂಡಿಕಾಯಾಗ, ದುರ್ಗಾಹೋಮ, ಪಾರಾಯಣ, ವಿಶೇಷ ಪೂಜೆ, ರಂಗಪೂಜೆ, ಭಜನೆ, ಅನ್ನಸಂತರ್ಪಣೆ ಹಾಗೂ ತುಲಾಭಾರ ಸೇವೆ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.
ಮಹಾನವಮಿ ಪ್ರಯುಕ್ತ ಶುಕ್ರವಾರ ಕಟ್ಟೆ ಶಂಕರ ಭಟ್ ನೇತೃತ್ವದಲ್ಲಿ ಹೇರಂಜಾಲು ಶ್ರೀನಿವಾಸ ಜೋಯಿಸ ಮತ್ತು ಮಕ್ಕಿದೇವಸ್ಥಾನ ಗುರುರಾಜ ಭಟ್ಟರ ಸಹಭಾಗಿತ್ವದಲ್ಲಿ ಸಾರ್ವಜನಿಕ ಮಹಾಚಂಡಿಕಾಯಾಗ ನಡೆಯಿತು. ಸಹಸ್ರಾರು ಸಂಖ್ಯೆ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ವಿಜಯದಶಮಿ ಪ್ರಯುಕ್ತ ಶನಿವಾರ ದೇವರಿಗೆ ಹಾಲು ಮತ್ತು ತುಪ್ಪದ ಅಭಿಷೇಕ ನಡೆಯಿತು.