

ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದ ಅಡಿಯಲ್ಲಿ ಬಂಟ್ವಾಳ ತಾಲೂಕಿನ ವಾಮದಪದವು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದ ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಟ್ಯೂಷನ್ ತರಗತಿ ಇತ್ತೀಚೆಗೆ ಆರಂಭಿಸಲಾಯಿತು.
ಜನಜಾಗೃತಿ ವೇದಿಕೆ ಸದಸ್ಯ ನವೀನ್‌ಚಂದ್ರ ಶೆಟ್ಟಿ ತರಗತಿ ಉದ್ಘಾಟಿಸಿ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆಯ ಹಲವಾರು ಕಾರ್ಯಕ್ರಮಗಳು ರಾಜ್ಯಾದ್ಯಂತ ಉತ್ತಮವಾಗಿ ನಡೆಯುತ್ತಿವೆ. ಮಕ್ಕಳ ಶಿಕ್ಷಣಕ್ಕಾಗಿ ಹಲವಾರು ಕಾರ್ಯಕ್ರಮಗಳಿವೆ ಎಂದರು.
ಕಾಲೇಜಿನ ಉಪ ಪ್ರಾಂಶುಪಾಲ ಬಾಲಕೃಷ್ಣ ಎಲ್, ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್, ಒಕ್ಕೂಟ ಅಧ್ಯಕ್ಷ ಅನಿತಾ ಪ್ರಭು, ಜ್ಞಾನವಿಕಾಸ ಸಂಯೋಜಕಿ ಗುಣವತಿ, ವಲಯ ಮೇಲ್ವಿಚಾರಕಿ ಸವಿತಾ, ಸೇವಾ ಪ್ರತಿನಿಧಿಗಳಾದ ಮೋಹನ್‌ದಾಸ್, ಭಾರತಿ, ಶಿಕ್ಷಕರಾದ ಸುಧಾಕರ್, ಅಮೃತಾ, ಮಮತಾ, ಶಾಂತಲಾ, ಶ್ರೀಲತಾ ಉಪಸ್ಥಿತರಿದ್ದರು.
ರಾಧಾಕೃಷ್ಣ ಸ್ವಾಗತಿಸಿದರು. ಜಗದೀಶ್ ವಂದಿಸಿದರು. ಜ್ಞಾನ ವಿಕಾಸ ಸಮನ್ವಯಧಿಕಾರಿ ಶ್ರುತಿ ಕಾರ್ಯಕ್ರಮ ನಿರೂಪಿಸಿದರು.