ಕ್ಷಯಮುಕ್ತ ಭಾರತಕ್ಕಾಗಿ ಕೈಜೋಡಿಸಿ: ತಾಪಂ ಎಡಿ ಕೆ.ಎಸ್.ಮಲ್ಲನಗೌಡ

Untitled design
ಕಂಪ್ಲಿಯ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪೊಲೀಸ್ ಸಿಬ್ಬಂದಿಯನ್ನು ಆರೋಗ್ಯ ಸಹಾಯಕ ದೇವಣ್ಣ ಪರೀಕ್ಷಿಸಿದರು.
Published on

ಕಂಪ್ಲಿ: ನಿತ್ಯ ವ್ಯಾಯಾಮ, ಧ್ಯಾನ, ಯೋಗಾಭ್ಯಾಸ ಮಾಡುವುದರಿಂದ ರೋಗಗಳಿಂದ ವಿಮುಖರಾಗಬಹುದು ಎಂದು ತಾಪಂ ಎಡಿ ಕೆ.ಎಸ್.ಮಲ್ಲನಗೌಡ ಹೇಳಿದರು.


ಇಲ್ಲಿನ ಸಿಎಚ್‌ಸಿಯಲ್ಲಿ ಬುಧವಾರ ಸಕ್ರಿಯ ಕ್ಷಯ ರೋಗಿಗಳ ಲಕ್ಷಣವುಳ್ಳವರ ಪತ್ತೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪೌಷ್ಟಿಕ ಅಂಶವುಳ್ಳ ಸಮತೋಲನ ಆಹಾರ ಸೇವಿಸುವಲ್ಲಿ ಕಾಳಜಿವಹಿಸಬೇಕು ಎಂದು ತಿಳಿಸಿದರು.


ವೈದ್ಯಾಧಿಕಾರಿ ಡಾ.ರಾಧಿಕಾ ಮಾತನಾಡಿ, ಇನ್ನೆರಡು ವರ್ಷದೊಳಗೆ ಭಾರತವನ್ನು ಕ್ಷಯಮುಕ್ತ ಮಾಡಲು ಎಲ್ಲರೂ ಕೈಜೋಡಿಸಬೇಕು. ಧೂಳು ವಾತಾವರಣದಲ್ಲಿ ಕೆಲಸ ಮಾಡುವುದರಿಂದ ಕ್ಷಯ ಹರಡುವ ಸಾಧ್ಯತೆಗಳಿವೆ.

ಆದ್ದರಿಂದ ಬೀದಿಬದಿ ವ್ಯಾಪಾರಿಗಳು, ಪೊಲೀಸರು, ಇಟ್ಟಂಗಿ ಭಟ್ಟಿ, ಅಕ್ಕಿಗಿರಣಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರು, ಪೌರ ಕಾರ್ಮಿಕರು ಕಫ ಪರೀಕ್ಷೆ ಮಾಡಿಸಬೇಕು ಎಂದರು. ಪಟ್ಟಣದ ಪೊಲೀಸ್ ಠಾಣೆ ಸಿಬ್ಬಂದಿಯನ್ನೂ ತಪಾಸಣೆ ಮಾಡಲಾಯಿತು.


ಬಳ್ಳಾರಿಯ ಟಿಬಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಪಂಪಾಪತಿ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಚನ್ನಬಸವರಾಜ, ಪ್ರಭಾಕರ, ಎಸ್‌ಡಿಎಸ್‌ಗಳಾದ ಈರಣ್ಣ, ಪರಿಮಳಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net