ಪ್ರಪಂಚದ ಸಮಸ್ಯೆಗಳ ಪರಿಹಾರಕ್ಕೆ ಯತ್ನ

expro
ಎಕ್ಸ್‌ಪ್ರೋ 2024-25ರ ವಾರ್ಷಿಕ ಪ್ರದರ್ಶನದ ಉದ್ಘಾಟನಾ ಸಮಾರಂಭ ನಡೆಯಿತು. ಗುರುರಾಜ್ ರಾವ್, ಡಾ.ನಿರಂಜನ್ ಎನ್ ಮೊದಲಾದವರಿದ್ದರು.
Published on

ಕಾರ್ಕಳ: ಪ್ರಪಂಚದ ಸಮಸ್ಯೆಗಳಿಗೆ ಪರಿಹಾರ ಅನ್ವೇಷಿಸಲು ವಿದ್ಯಾರ್ಥಿಗಳು ಕಾರ್ಯೋನ್ಮುಖರಾಗಬೇಕು ಎಂದು ಸಾಸ್ಕೆನ್ ಟೆಕ್ನಾಲಜೀಸ್ ಲಿಮಿಟೆಡ್‌ನ ಕ್ಯಾಂಪಸ್ ಕನೆಕ್ಟ್ ಮುಖ್ಯಸ್ಥ ಗುರುರಾಜ್ ರಾವ್ ಎಚ್. ಹೇಳಿದರು.

ನಿಟ್ಟೆಯ ಎನ್‌ಎಂಎಎಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಹಳೇ ವಿದ್ಯಾರ್ಥಿಗಳ ಸಂಘ ವೆನಮಿತಾ ಸಹಯೋಗದೊಂದಿಗೆ ಮಂಗಳವಾರ ಅಂತಿಮ ವರ್ಷದ ಯುಜಿ ಪ್ರಾಜೆಕ್ಟ್ ಎಕ್ಸ್‌ಪ್ರೋ 2024-25ರ ವಾರ್ಷಿಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. ಪ್ರಾಂಶುಪಾಲ ಡಾ.ನಿರಂಜನ್ ಎನ್.ಚಿಪ್ಲೂಣ್ಕಕರ್ ಅಧ್ಯಕ್ಷತೆ ವಹಿಸಿದ್ದರು.

ಕಾಲೇಜಿನ ವಿವಿಧ ಇಂಜಿನಿಯರಿಂಗ್ ವಿಭಾಗಗಳ ಒಟ್ಟು 333 ಯೋಜನೆಗಳನ್ನು ಪ್ರದರ್ಶಿಸಲಾಯಿತು. ಎಕ್ಸ್‌ಪ್ರೋ ಆಬ್ಸ್‌ಟ್ರ್ಯಾಕ್ಟ್ ವಾಲ್ಯೂಮ್-23ನ್ನು ಬಿಡುಗಡೆಗೊಳಿಸಲಾಯಿತು. ಡಾ.ನಯನಾ ಶೆಟ್ಟಿ ಸ್ವಾಗತಿಸಿದರು. ಡಾ.ಸುಬ್ರಹ್ಮಣ್ಯ ಭಟ್ ವಂದಿಸಿದರು. ಡಾ.ಹರ್ಷಿತಾ ಜತ್ತಣ್ಣ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net