ಗೊಂಬೆಯಾಟ ಸಂಸ್ಥೆಯಿಂದ ಊರಿಗೆ ಖ್ಯಾತಿ

gombe
ಉಪ್ಪಿನಕುದ್ರು ಗೊಂಬೆಮನೆಯಲ್ಲಿ ಪ್ರತಿ ತಿಂಗಳು ಆಯೋಜಿಸುವ ಪ್ರತಿಭೆ ನಿಮ್ಮದು ವೇದಿಕೆ ನಮ್ಮದು ಕಾರ್ಯಕ್ರಮ ನಡೆಯಿತು. ಪಳ್ಳಿ ಕಿಶನ್ ಹೆಗ್ಡೆ, ಶ್ರೀನಿವಾಸ ಶೆಣೈ, ಸುನಿಲ್ ಎಚ್.ಜಿ ಮೊದಲಾದವರಿದ್ದರು.
Published on

ವಿಜಯವಾಣಿ ಸುದ್ದಿಜಾಲ ಕುಂದಾಪುರ

ಆಸಕ್ತಿಯನ್ನೇ ಶಕ್ತಿಯನ್ನಾಗಿಸಿ ಉಪ್ಪಿನಕುದ್ರುವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗೊಳಿಸಿದ ಕೀರ್ತಿ ಯಕ್ಷಗಾನ ಗೊಂಬೆಯಾಟ ಅಕಾಡೆಮಿಗೆ ಸಲ್ಲುತ್ತದೆ ಎಂದು ಸಾಲಿಗ್ರಾಮ ಯಕ್ಷಗಾನ ಮೇಳದ ಮುಖ್ಯಸ್ಥ ಪಳ್ಳಿ ಕಿಶನ್ ಹೆಗ್ಡೆ ಹೇಳಿದರು.

ಉಪ್ಪಿನಕುದ್ರು ಶ್ರೀ ದೇವಣ್ಣ ಪದ್ಮನಾಭ ಕಾಮತ್ ಮೆಮೋರಿಯಲ್ ಯಕ್ಷಗಾನ ಗೊಂಬೆಯಾಟ ಟ್ರಸ್ಟ್ ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿಯ ಗೊಂಬೆಮನೆಯಲ್ಲಿ ಪ್ರತಿ ತಿಂಗಳು ಆಯೋಜಿಸುವ ಪ್ರತಿಭೆ ನಿಮ್ಮದು ವೇದಿಕೆ ನಮ್ಮದು ಕಾರ್ಯಕ್ರಮದ ಅಂಗವಾಗಿ ಭಾನುವಾರ ಜರುಗಿದ 100ನೇ ತಿಂಗಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹಳ್ಳಿಹೊಳೆಯ ಉದ್ಯಮಿ ವಿಠೋಭ ಶ್ರೀನಿವಾಸ ಶೆಣೈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ವಿಠೋಭ ಶ್ರೀನಿವಾಸ ಶೆಣೈ ಅವರನ್ನು ಸನ್ಮಾನಿಸಲಾಯಿತು. ಪತ್ರಕರ್ತ ಸುನೀಲ್ ಎಚ್.ಜಿ. ಬೈಂದೂರು, ಮುದ್ರಣಗಾರ ಹರೀಶ್ ದೇವಾಡಿಗ ಉಪ್ಪೂರು, ಧ್ವನಿ ಬೆಳಕು ಸಂಯೋಜಕ ರಾಜು ಮತ್ತು ವಿಜಯ, ಉಪ್ಪಿನಕುದ್ರು ನಿವಾಸಿಗಳಾದ ಚಂದ್ರ, ರಾಧಾ, ಕಾವೇರಿ, ಶಾರದಾ ಅವರನ್ನು ಗೌರವಿಸಲಾಯಿತು ಪ್ರಮುಖರಾದ ವೆಂಕಟೇಶ ಪೈ, ವೆಂಕಟೇಶ ವೈದ್ಯ, ಯು.ಎನ್. ಆನಂದರಾಮ ಐತಾಳ್, ಸುರೇಶ್ ತಲ್ಲೂರು ಉಪಸ್ಥಿತರಿದ್ದರು.

ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್ ಸ್ವಾಗತಿಸಿದರು. ಸುಬ್ರಹ್ಮಣ್ಯ ನಾವಡ ಪ್ರಾರ್ಥಿಸಿದರು. ನಿವೃತ್ತ ಶಿಕ್ಷಕ ನಾಗೇಶ್ ಶ್ಯಾನುಭಾಗ್ ಕಾರ್ಯಕ್ರಮ ನಿರೂಪಿಸಿದರು. ಉದಯ್ ಭಂಡಾರ್ಕಾರ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net