ಭೈರವೇಶ್ವರ ಬೆಟ್ಟಕ್ಕೆ ಮಕ್ಕಳ ಚಾರಣ

HUN-APR-18-1(DEVAGALLI SHCOOL STUDENTS)
Published on

ಹುಣಸೂರು: ತಾಲೂಕಿನ ಬಿಳಿಕೆರೆ ಹೋಬಳಿ ದೇವಗಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜನೆಗೊಂಡಿರುವ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ ಅಂಗವಾಗಿ ಬುಧವಾರ ತಾಲೂಕಿನ ಯಲಚನಹಳ್ಳಿಯ ಶ್ರೀ ಭೈರವೇಶ್ವರ ಬೆಟ್ಟಕ್ಕೆ ಚಾರಣ ಹಮ್ಮಿಕೊಳ್ಳಲಾಗಿತ್ತು.


ಚಾರಣದ ವೇಳೆ ಬೆಟ್ಟದಲ್ಲಿರುವ ಸಸ್ಯ ಸಂಪತ್ತುಗಳ ಪರಿಚಯ, ಔಷಧ ಗಿಡಮೂಲಿಕೆಗಳ ಪರಿಚಯವನ್ನು ಮಾಡಿಕೊಡಲಾಯಿತು. ಈ ವೇಳೆ ಮಾತನಾಡಿದ ಮುಖ್ಯ ಶಿಕ್ಷಕಿ ಶಶಿಕಲಾ, ಕಲಿಕೆಯೊಂದಿಗೆ ಪರಿಸರ ಸಂರಕ್ಷಣೆ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಚಾರಣದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪರಿಸರಕ್ಕೆ ಹಾನಿಯುಂಟು ಮಾಡುತ್ತಿದ್ದೇವೆ ಎಂಬ ಅಂಶ ವಿದ್ಯಾರ್ಥಿಗಳಲ್ಲಿ ಅರಿವಾದಲ್ಲಿ ಮುಂದಿನ ಆನಾಹುತಗಳನ್ನು ಕನಿಷ್ಠ ಪ್ರಮಾಣದಲ್ಲಾದರೂ ನಿಯಂತ್ರಿಸಬಹುದು ಎನ್ನುವ ಆಶಯ ನಮ್ಮೆಲ್ಲರದ್ದಾಗಿದೆ. ಬೆಟ್ಟ ಹತ್ತುವ ಮತ್ತು ಇಳಿಯುವ ಪ್ರಕ್ರಿಯೆಯಲ್ಲಿ ಪರಿಸರ ಸಂರಕ್ಷಣೆ ಮತ್ತು ಪರಿಸರದ ಕುರಿತಾಗಿ ಒಲವು ಮೂಡಿಸುವ ದೃಷ್ಟಿಯಿಂದ ಚಾರಣ ನಡೆದಿದ್ದು, ವಿದ್ಯಾರ್ಥಿಗಳ ಸ್ಪಂದನೆ ಸಂತಸ ತಂದಿದೆ ಎಂದರು.


ಚಾರಣ ಕಾರ್ಯಕ್ರಮದಲ್ಲಿ ಏಕಲ್ ವಿದ್ಯಾಲಯ ಗದ್ದಿಗೆ ಸಂಚಿನ ಅಧ್ಯಕ್ಷ ಕುಂಟೇಗೌಡರು, ಏಕಲ್ ಗ್ರಾಮೋಥಾನ್ ಫೌಂಡೇಷನ್ ಸಂಯೋಜಕರಾದ ಗೋವಿತ್, ಕಿರಣ್ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮಕ್ಕಳಿಗೆ ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net