ಕಾಳಿ ನದಿಯಿಂದ ಲಾರಿ ಎತ್ತುವ ಕಾರ್ಯಾಚರಣೆ‌ ಆರಂಭ

Truck rescu operations
Published on

ಕಾರವಾರ: ಕಾಳಿ ನದಿ ಸೇತುವೆ ಕುಸಿದು ನೀರಿಗೆ ಬಿದ್ದ ಲಾರಿಯನ್ನು ದಡಕ್ಕೆ ಎಳೆತರುವ ಕಾರ್ಯಾಚರಣೆ ಬುಧವಾರ ಪ್ರಾರಂಭವಾಗಿದೆ. ತಮಿಳುನಾಡು ನೋಂದಣಿ ಸಂಖ್ಯೆಯ ಲಾರಿಯು ಸದಾಶಿವಗಡ ಭಾಗದಲ್ಲಿ ಬಿದ್ದಿದೆ. ಯಲ್ಲಾಪುರದ ಎರಡು ಕ್ರೇನ್ ಹಾಗೂ ಮುಳುಗು ತಜ್ಞರು ಐಆರ್‌ಬಿಯಿಂದ ಗುತ್ತಿಗೆ ಪಡೆದು ಈ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಅಳಿವೆವಾಡ ಜಟ್ಟಿಯ ಬಳಿ ಕ್ರೇನ್‌ಗಳನ್ನು ನಿಲ್ಲಿಸಿ, ದೋಣಿಯಲ್ಲಿ ಕಬ್ಬಿಣದ ಹಗ್ಗ ಕೊಂಡೊಯ್ದು, ಲಾರಿಗೆ ಸಿಕ್ಕಿಸಿ, ಅದನ್ನು ದಡಕ್ಕೆ ಎಳೆತರುವ ಪ್ರಯತ್ನ ನಡೆಯಿತು. ಆದರೆ, ಲಾರಿ ಸೇತುವೆಯ ಅವಶೇಷಗಳಡಿ ಸಿಲುಕಿಹಾಕಿಕೊಂಡಿದ್ದು, ಅದನ್ನು ಎಳೆಯುವುದು ಕಷ್ಟವಾಗಿದೆ. ಕಾರ್ಯಾಚರಣೆ ಮುಂದುವರಿಯಲಿದೆ. ಪೊಲೀಸರು, ಕರಾವಳಿ ಕಾವಲುಪಡೆಯ ಬೋಟ್‌ಗಳು ಸ್ಥಳದಲ್ಲಿ ಭದ್ರತಾ ವ್ಯವಸ್ಥೆ ಕೈಗೊಂಡಿದ್ದಾರೆ.


ಲಾರಿ ಮಾಲೀಕ ಹುಚ್ಚಾಟ:


ಲಾರಿ ಮಾಲೀಕ ತಮಿಳುನಾಡು ಮೂಲದ ಸೇಂದಿಲ್ ಕುಡಿದ ನಶೆಯಲ್ಲಿ ಮುರಿದು ಬಿದ್ದ ಕಾಳಿ ಸೇತುವೆಯಿಂದ ಕೆಳಗೆ ಹಾರಲು ಯತ್ನಿಸಿದ ಘಟನೆ ಮಂಗಳವಾರ ರಾತ್ರಿ ನಡೆಯಿತು. ಕೆಳಗೆ ಬಿದ್ದು ವಾರವಾಗುತ್ತ ಬಂದರೂ ಅದನ್ನು ಮೇಲೆ ತೆಗೆಯಲು ಜಿಲ್ಲಾಡಳಿತ ಯತ್ನಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪೊಲೀಸರು ಅವರನ್ನು ತಡೆದು ಬೇರೆಡೆ ಕರೆತಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net