ಲಾರಿಗೆ ಕಾರು ಡಿಕ್ಕಿ, ಇಬ್ಬರ ದುರ್ಮರಣ

Accident
Published on

ರಾಣೆಬೆನ್ನೂರ: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಇಬ್ಬರು ಮೃತಪಟ್ಟು ಮತ್ತಿಬ್ಬರು ಗಾಯಗೊಂಡ ಘಟನೆ ನಗರದ ಹೊರವಲಯದ ಮಾಗೋಡ ಸೇತುವೆ ಬಳಿ ಎನ್​ಎಚ್-48ರಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಸಿದೆ.

ಗದಗ ಜಿಲ್ಲೆ ನರಗುಂದ ತಾಲೂಕಿನ ಬೈರನಹಟ್ಟಿ ಗ್ರಾಮದ ಬಸವರಾಜ ಲಕ್ಷ್ಮಣ ತೆಗ್ಗಿನಮನಿ (27), ಶಂಕ್ರಪ್ಪ ರಂಗಪ್ಪ ತೆಗ್ಗಿನಮನಿ (21) ಮೃತ ದುರ್ದೈವಿಗಳು. ಇವರ ಜತೆಗಿದ್ದ ಸಂಜು ಲಕ್ಷ್ಮಣ ತೆಗ್ಗಿನಮನಿ (19) ಹಾಗೂ ಲಾರಿ ಚಾಲಕ ಮಹಾರಾಷ್ಟ್ರ ಸಾಥರ ಜಿಲ್ಲೆ ಖಂಡಾಳ ಗ್ರಾಮದ ಸೋಮನಾಥ ಅಶೋಕ ಮೋರೆ (25) ಎಂಬುವರು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರು ಹಾವೇರಿ ಕಡೆಯಿಂದ ಬೆಂಗಳೂರು ಕಡೆಗೆ ತೆರಳುತ್ತಿತ್ತು. ದಾರಿ ಮಧ್ಯೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಎದುರಿಗೆ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಕಾರು ಡಿಕ್ಕಿಯಾದ ಹೊಡೆತಕ್ಕೆ ಲಾರಿ ಕೂಡ ಪಲ್ಪಿಯಾಗಿ ಸೇತುವೆಯಿಂದ ಕೆಳಗೆ ಉರುಳಿ ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ನಗರದ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net