ಎರಡು ಕಾರಿಗೆ ಡಿಕ್ಕಿ ಹೊಡೆದು ಟೀ ಅಂಗಡಿಗೆ ನುಗ್ಗಿದ ಜವರಾಯ ನಾಲ್ವರನ್ನ ಬಲಿ ಪಡೆದ!

accident
Published on

ಚಿಕ್ಕಬಳ್ಳಾಪುರ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ 7ರ ಚದಲುಪುರ ಕ್ರಾಸ್ ಬಳಿ ಗುರುವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಜವರಾಯನಂತೆ ಬಂದ ಲಾರಿ ನಾಲ್ವರನ್ನು ಬಲಿ ಪಡೆದಿದೆ.

ಚಾಲಕನ ನಿಯಂತ್ರಣ ತಪ್ಪಿ ಲಾರಿ ರಸ್ತೆಬದಿ ನಿಂತ್ತಿದ್ದ ಎರಡು ಕಾರುಗಳ ಮೇಲೆ ಹರಿದು ಟೀ ಅಂಗಡಿಗೆ ಗುದ್ದಿದ ಪರಿಣಾಮ ನಾಲ್ವರು ಮೃತಪಟ್ಟಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.

ಚಿಕ್ಕಬಳ್ಳಾಪುರದ ವಕೀಲ ಯಾಮಣ್ಣಾಚಾರಿ (45), ಎಚ್​.ವಿ. ವೆಂಕಟೇಶ್ (45), ಬೆಂಗಳೂರಿನ ಆರ್​ಟಿಒ ಏಜೆಂಟ್​ ಕಲಾಂಜಿಯಮ್​ (47), ದೊಡ್ಡಬಳ್ಳಾಪುರದ ನಿತೀಶ್​ಗೌಡ (27) ಮೃತರು.

ಬೆಂಗಳೂರಿನಿಂದ ವೇಗವಾಗಿ ಬರುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿ ಬಳಿಯಿದ್ದ ಕೃಷ್ಣ ಕಾಂಡಿಮೆಂಟ್ಸ್ ಎಂಬ ಅಂಗಡಿಗೆ ನುಗ್ಗಿದೆ. ಇದಕ್ಕೂ ಮುನ್ನ 2 ಕಾರುಗಳಿಗೆ ಡಿಕ್ಕಿ ಹೊಡೆದಿದ್ದು, ಅದರಲ್ಲಿ ಕುಳಿತ್ತಿದ್ದ ಒಟ್ಟು ನಾಲ್ವರು ಮೃತಪಟ್ಟಿದ್ದಾರೆ. ಕಾರುಗಳು ಜಖಂಗೊಂಡಿವೆ. ಅಂಗಡಿ ಮುಂದೆ ಇಬ್ಬರು ಗಾಯಗೊಂಡಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಚಿಕ್ಕಬಳ್ಳಾಪುರ ಸಂಚಾರಿ ಠಾಣೆ ಪೊಲೀಸರು ಲಾರಿ ಚಾಲಕನನ್ನು ಬಂಧಿಸಿದ್ದಾರೆ. ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಸ್ಥಳ ಪರಿಶೀಲನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net