ಗೂಳಿಗಳ ಕಾದಾಟದಿಂದ ತೊಂದರೆ

gooli
Published on

ಗಂಗೊಳ್ಳಿ: ಎರಡು ಗೂಳಿಗಳು ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಕಾದಾಟ ಮಾಡಿಕೊಂಡ ಪರಿಣಾಮ ಗಂಗೊಳ್ಳಿ ಮ್ಯಾಂಗನೀಸ್ ರಸ್ತೆ ಸಮೀಪ ಮುಖ್ಯ ರಸ್ತೆಯಲ್ಲಿ ವಾಹನ ಸವಾರರು ಹಾಗೂ ಪಾದಚಾರಿಗಳು ಭಯಭೀತರಾಗಿ ಸಂಚರಿಸಿದರು.

ಕಾಳಗವನ್ನು ತಪ್ಪಿಸಲು ಸ್ಥಳೀಯರು ಹರಸಾಹಸಪಟ್ಟರು. ಪಂಪ್‌ಸೆಟ್ ಮೂಲಕ ನೀರು ಹಾಯಿಸಿದರೂ, ಬೆಂಕಿಯನ್ನು ಹತ್ತಿರ ತಂದರೂ, ಪಟಾಕಿ ಸಿಡಿಸಿದರೂ ಕಾದಾಟ ನಡೆಸುತ್ತಿದ್ದ ಗೂಳಿಗಳನ್ನು ಬೇರ್ಪಡಿಸಲು ಸಾಧ್ಯವಾಗಲಿಲ್ಲ. ಸುಮಾರು ಅರ್ಧ ಗಂಟೆ ಬಳಿಕ ಒಂದು ಗೂಳಿ ಓಡಿ ಹೋಗಿ ಕಾಳಗ ಕೊನೆಗೊಂಡಿತು. ಜನರು ನೆಮ್ಮದಿ ನಿಟ್ಟುಸಿರುಬಿಟ್ಟರು. ಗೂಳಿಗಳು ಮುಖ್ಯರಸ್ತೆಯಲ್ಲಿ ಕಾದಾಟ ನಡೆಸಿದ ಪರಿಣಾಮ ವಾಹನ ಹಾಗೂ ಪಾದಚಾರಿಗಳ ಸಂಚಾರ ತೊಂದರೆಯಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net