

ಬಂಟ್ವಾಳ: ಹೋಮ್ ಅಪ್ಲಾಯನ್ಸಸ್, ಫರ್ನಿಚರ್ಸ್ ಹಾಗೂ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳು ಒಂದೇ ಸೂರಿನಡಿ ಲಭ್ಯವಾಗುವ ಬಂಟ್ವಾಳದ ಪ್ರತಿಷ್ಠಿತ ಗೃಹೋಪಯೋಗಿ ವಸ್ತುಗಳ ಮಾರಾಟ ಮಳಿಗೆ ಭದ್ರಾ ಹೋಮ್ ಅಪ್ಲಾಯನ್ಸಸ್‌ನ ಬಂಟ್ವಾಳದ ಬಸ್ತಿಪಡ್ಪು, ಬಿ.ಸಿ.ರೋಡ್ ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣದ ಮುಂಭಾಗದ ಸೋಮಯಾಜಿ ಹೌಸ್ ಹಾಗೂ ಮಡಂತ್ಯಾರು ಕೃಷಿ ಪತ್ತಿನ ಸಹಕಾರಿ ಸಂಘದ ವಾಣಿಜ್ಯ ಸಂಕೀರ್ಣದಲ್ಲಿರುವ ಶೋರೂಮ್‌ಗಳಲ್ಲಿ ದೀಪಾವಳಿ ಹಾಗೂ ಮಳಿಗೆಯ ಚತುರ್ಥ ವರ್ಷಾಚರಣೆ ಹಿನ್ನೆಲೆಯಲ್ಲಿ ಭಾರಿ ಕೊಡುಗೆಗಳೊಂದಿಗೆ ಟ್ರಿಪಲ್ ಧಮಾಕ ಸೇಲ್ ಅ.21ಕ್ಕೆ ಆರಂಭಗೊಂಡಿದ್ದು, ನ.10ರ ವರೆಗೆ ನಡೆಯಲಿದೆ.
ಬಿ.ಸಿ.ರೋಡು ಜಂಕ್ಷನ್‌ನಿಂದ ಬಂಟ್ವಾಳ ಪೇಟೆ ರಸ್ತೆಯ ಕೇವಲ 800 ಮೀ. ದೂರದ ಬಸ್ತಿಪಡ್ಪು ಅಗ್ನಿಶಾಮಕ ಠಾಣೆಯ ಮುಂಭಾಗದಲ್ಲಿರುವ ಭದ್ರಾ ಹೋಮ್ ಅಪ್ಲಾಯನ್ಸಸ್ ಮಳಿಗೆ ವಿಸ್ತಾರವಾದ ಶೋರೂಮ್ ಒಳಗೊಂಡಿದ್ದು, ವಿಶಾಲ ಪಾರ್ಕಿಂಗ್ ಸೌಲಭ್ಯವೂ ಇದೆ. ಪ್ರಸ್ತುತ ಗ್ರಾಹಕರ ಅನುಕೂಲಕ್ಕಾಗಿ ಬಿ.ಸಿ.ರೋಡು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗದ ಸೋಮಯಾಜಿ ಹೌಸ್ ಹಾಗೂ ಮಡಂತ್ಯಾರು ಕೃಷಿ ಪತ್ತಿನ ಸಹಕಾರಿ ಸಂಘದ ವಾಣಿಜ್ಯ ಸಂಕೀರ್ಣದಲ್ಲಿ ಹೊಸ ಶಾಖೆಗಳನ್ನು ತೆರೆಯಲಾಗಿದೆ.
ಸುಲಭ ಕಂತುಗಳಲ್ಲಿ ಉತ್ಪನ್ನಗಳ ಖರೀದಿಗೆ ಅವಕಾಶ, ಉಚಿತ ಸರ್ವೀಸ್ ಕ್ಯಾಂಪ್ ಸೌಲಭ್ಯ, ಫುಡ್ ಫೆಸ್ಟಿವಲ್, ಇಎಂಐ ಮೇಳ, ಕ್ಯಾಶ್‌ಬ್ಯಾಕ್ ವೋಚರ್, ವೋಚರ್, ಜೀರೊ ಡೌನ್ ಪೇಮೆಂಟ್, ಹಲವು ಕಂಪನಿಗಳ ಸಹಯೋಗದೊಂದಿಗೆ ಸುಲಭ ಕಂತುಗಳಲ್ಲಿ ಉತ್ಪನ್ನಗಳ ಖರೀದಿಗೆ ಅವಕಾಶವಿದೆ. ಬಜಾಜ್ ಫಿನ್‌ಸರ್ವ್, ಎಚ್‌ಡಿಬಿ ಫಿನಾನ್ಶಿಯಲ್ ಸರ್ವೀಸಸ್, ಐಡಿಎಫ್‌ಸಿ ಮೂಲಕ ಶೇ.0 ಇಎಂಐನಲ್ಲಿ ಸಾಲ ಸೌಲಭ್ಯ ಲಭ್ಯವಾಗಲಿದೆ.
ಧಮಾಕ ಸೇಲ್‌ನಲ್ಲಿ ಮಿಕ್ಸರ್ ಗ್ರೈಂಡರ್ ಖರೀದಿಗೆ ಎಲೆಕ್ಟ್ರಿಕ್ ಕೆಟಲ್, ಇಂಡಕ್ಷನ್ ಕುಕ್‌ಟಾಪ್ ಖರೀದಿಗೆ 3 ಲೀ. ಕುಕ್ಕರ್, ಸಿಂಗಲ್ ಡೋರ್ ರೆಫ್ರಿಜರೇಟರ್ ಖರೀದಿಗೆ ಎಲೆಕ್ನಿಕ್ ಕೆಟಲ್, ಡೈನಿಂಗ್ ಟೇಬಲ್ ಖರೀದಿಗೆ ಟೀಪಾಯ್, ಸೋಫಾಸೆಟ್ ಖರೀದಿಗೆ ಪ್ಲಾಸ್ಟಿಕ್ ಈಸಿ ಚೇರ್ ಉಚಿತವಾಗಿ ಸಿಗಲಿದೆ. ಬಿರಿಯಾನಿ ಪಾಟ್ ಖರೀದಿಗೆ ಶೇ.40 ರಿಯಾಯಿತಿ, ಭದ್ರಾ ಬ್ರೇಕ್‌ಫಾಸ್ಟ್ ಕಾಂಬೊಗೆ ಕೇವಲ 2,750 ರೂ., ಭದ್ರಾ ಫ್ಯಾಮಿಲಿ ಕಾಂಬೊ ಕೇವಲ 7499 ರೂ.ಗಳಿಗೆ ಲಭಿಸಲಿದ್ದು, ಕಾಂಬೊ ಆಫರ್‌ಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಲಭಿಸುತ್ತಿದೆ. ಸೀಲಿಂಗ್ ಫ್ಯಾನ್‌ಗಳ ಸಂಗ್ರಹ, ಗ್ಯಾಸ್ ಗೀಸರ್, ಗ್ಯಾಸ್ ಸ್ಟವ್, ತವಾ, ಏರ್ ಕಂಡೀಷನರ್‌ಗಳು, ಆಫೀಸ್ ಚೇರ್‌ಗಳು, ಎಲ್‌ಇಡಿ ಟಿವಿಗಳು, ವಾಷಿಂಗ್ ಮಷಿನ್, ಕ್ಲೋತ್ ಸ್ಟಾೃಂಡ್, ಸೋಫಾಸೆಟ್, ಗ್ಲಾಸ್ ಟೀಪಾಯ್, ಡೋರ್ ವಾರ್ಡ್‌ರೋಬ್‌ಗಳ ಅಪೂರ್ವ ಸಂಗ್ರಹವಿದೆ ಎಂದು ಮಳಿಗೆಯ ಪ್ರವರ್ತಕ ಮಂಜುನಾಥ ಆಚಾರ್ಯ ತಿಳಿಸಿದ್ದಾರೆ.
ಭದ್ರಾ ಹೋಂ ಹೋಮ್ ಅಪ್ಲಾಯನ್ಸಸ್‌ನಲ್ಲಿ ವಿಜಯವಾಣಿ ವಿಜಯೋತ್ಸವ ದಸರಾ ಹಬ್ಬದಿಂದ ಆರಂಭಗೊಂಡಿದ್ದು ದೀಪಾವಳಿಯವರೆಗೆ ನಡೆಯಲಿದೆ. 2 ಸಾವಿರ ರೂ.ಗಿಂತ ಅಧಿಕ ಮೊತ್ತದ ವಸ್ತುಗಳನ್ನು ಖರೀದಿಸಿದಾಗ ವಿಜಯವಾಣಿ ವಿಜಯೋತ್ಸವದ ಲಕ್ಕಿ ಡ್ರಾ ಕೂಪನ್ ಪಡೆಯುವ ಅವಕಾಶವಿದೆ. ಹ್ಯಾಚ್ ಬ್ಯಾಕ್ ಕಾರು 7, ದ್ವಿಚಕ್ರ ವಾಹನ 10, 32 ಇಂಚಿನ ಎಲ್‌ಇಡಿ ಟಿವಿ 10, ರೆಫ್ರಿಜರೇಟರ್ 10, ವಾಷಿಂಗ್ ಮಷಿನ್ 10, 1 ಗ್ರಾಂ ಚಿನ್ನದ ನಾಣ್ಯ 140, ಸೇಫ್ ಲಾಕರ್ 10, ವೆಟ್ ಗ್ರೈಂಡರ್ 20, 20 ಗ್ರಾಂ ಬೆಳ್ಳಿ ನಾಣ್ಯ 223, ಮಿಕ್ಸರ್ 150, ಟ್ರಾಲಿ ಬ್ಯಾಗ್ 20, ಎಲೆಕ್ಟ್ರಿಕ್ ಕೆಟಲ್ 350, ಸ್ಮಾರ್ಟ್ ವಾಚ್ 30, ಇಂಡಕ್ಷನ್ ಸ್ಟವ್ 90, ಹಾಟ್ ಫ್ಲಾಸ್ಕ್ 300, ಪ್ರೆಶರ್ ಕುಕ್ಕರ್ 400, ಪೆಡೆಸ್ಟಲ್ ಫ್ಯಾನ್ 260, ಕಾಪರ್ ಬಾಟಲ್ 470 ಸೇರಿ 2500ಕ್ಕೂ ಅಧಿಕ ಬಹುಮಾನಗಳನ್ನು ಗ್ರಾಹಕರು ಗೆಲ್ಲಬಹುದಾಗಿದೆ.