ಬದಿಯಡ್ಕ ವಲಯ ಸಮಿತಿ ರಚನೆ

Bdk_Zonal Committee
Published on: 

ಬದಿಯಡ್ಕ: ನಾರಂಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಯಶಸ್ಸಿಗಾಗಿ ಬದಿಯಡ್ಕ ವಲಯ ಸಮಿತಿಯನ್ನು ರೂಪಿಸಲಾಯಿತು. ಬದಿಯಡ್ಕ ಗಣೇಶ ಮಂದಿರದಲ್ಲಿ ಬುಧವಾರ ಜರಗಿದ ಸಭೆಯಲ್ಲಿ ನರೇಂದ್ರ ಬಿ.ಎನ್. ಬದಿಯಡ್ಕ ಅಧ್ಯಕ್ಷತೆ ವಹಿಸಿದ್ದರು.

ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಮಾಸ್ತರ್ ಕಾರ್ಯಕ್ರಮದ ರೂಪುರೇಷೆಯನ್ನು ವಿವರಿಸಿ ಪುರಾತನ ದೇವಸ್ಥಾನದ ಐತಿಹ್ಯವನ್ನು ತಿಳಿಸಿದರು.

ಶ್ರೀ ಉಮಾಮಹೇಶ್ವರ ಸೇವಾ ಸಮಿತಿಯ ಅಧ್ಯಕ್ಷ ತಲೇಕ ಸುಬ್ರಹ್ಮಣ್ಯ ಭಟ್, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ನಿತ್ಯಾನಂದ ಶೆಣೈ ಬದಿಯಡ್ಕ ಉಪಸ್ಥಿತರಿದ್ದರು. ಶಿಕ್ಷಕ ಗುರುಪ್ರಸಾದ್ ರೈ ಸ್ವಾಗತಿಸಿ, ರಾಜೇಶ್ ಬಿ.ಕೆ.ವಂದಿಸಿದರು. ಊರಿನ ಭಗವದ್ಭಕ್ತರು ವಲಯ ಸಮಿತಿಯನ್ನು ರೂಪಿಸಲಾಯಿತು.