

ಸವಣೂರ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸವಣೂರ ಶಾಖೆ ವತಿಯಿಂದ ತಾಲೂಕಿನ ಚಿಲ್ಲೂರಬಡ್ನಿ ಗ್ರಾಮದಲ್ಲಿ 77ನೇ ಸ್ವಾತಂತ್ರ್ಯ ದಿನದ ಅಂಗವಾಗಿ ನಿರಂತರ ಮೂರು ದಿನ ಸ್ವಾತಂತ್ರ್ಯ ಪರ್ವ ಎಂಬ ಕಾರ್ಯಕ್ರಮ ನಡೆಯಿತು.
ಆ. 13ರಂದು ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ 43 ಯುವಕರು ರಕ್ತದಾನ ಮಾಡಿದರು. ಆ. 14ರಂದು ಸಂಜೆ ಅಖಂಡ ಭಾರತ ಸಂಕಲ್ಪ ದಿನವನ್ನು ಆಚರಿಸಿ, ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಂಜಿನ ಮೆರವಣಿ ಕೈಗೊಳ್ಳಲಾಯಿತು.
ಯೋಧ ಶಂಕರ ಭಜಂತ್ರಿ ಪಂಜಿನ ಮೆರವಣಿಗೆಗೆ ಚಾಲನೆ ನೀಡಿದರು. ಆ. 15ರಂದು ಗ್ರಾಮದಲ್ಲಿ ತ್ರಿವರ್ಣ ಧ್ವಜದ ಯಾತ್ರೆ ಕೈಗೊಳ್ಳಲಾಯಿತು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆ ವಿದ್ಯಾರ್ಥಿಗಳು, ಯುವಕರು ಜಿಲ್ಲಾ ಸಂಚಾಲಕ ಸಿದ್ರಾಮೇಶ ಪಾಟೀಲ, ತಾಲೂಕು ಸಂಚಾಲಕ ಈರಣ್ಣ ಹರದಗಟ್ಟಿ, ಪದಾಧಿಕಾರಿಗಳಾದ ಶಂಭು ಕಲ್ಮಠ, ದೇವರಾಜ ದೇವಗಿರಿ, ಅಶೋಕ ಧಾರವಾಡ, ತಿಪ್ಪಣ್ಣ ಸೂರಣಗಿ, ಶಾಂತಯ್ಯ ಹಿರೇಮಠ, ಗಣೇಶ ಕಾಯತ್, ಪ್ರಮೋದ ಅಣ್ಣಿಗೇರಿ, ಸಂತೋಷ್ ಪೂಜಾರ, ದರ್ಶನ ಹಿರೇತನದ, ಮೆಹಬೂಬ್ ಎಸ್ ಪಿ., ಕಿರಣಕುಮಾರ ದೊಡ್ಡಮನಿ, ಬಸವರಾಜ ಮೇಟಿ, ಬಸವರಾಜ ಗೌಳೆರ ಇದ್ದರು.