ಮುಳಿಂಜದಲ್ಲಿ ಡಿಇಒ ದಿನೇಶ್‌ಗೆ ಗೌರವಾರ್ಪಣೆ

New Project (18)
Published on

ಉಪ್ಪಳ: ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿಯಾಗಿ 6 ವರ್ಷಗಳಿಂದ ಸೇವೆ ಸಲ್ಲಿಸಿ ಇದೀಗ ಕಾಸರಗೋಡು ಜಿಲ್ಲಾ ವಿದ್ಯಾಧಿಕಾರಿಯಾಗಿರುವ ದಿನೇಶ ವಿ. ಅವರು ಸೇವೆ ಸಲ್ಲಿಸುತ್ತಿದ್ದು, ಪ್ರಸ್ತುತ ವರ್ಷ ನಿವೃತ್ತಿಗೊಳ್ಳಲಿದ್ದಾರೆ. ಅವರನ್ನು ಮುಳಿಂಜ ಜಿ.ಎಲ್.ಪಿ. ಶಾಲೆ ವತಿಯಿಂದ ಸೋಮವಾರ ಗೌರವಿಸಲಾಯಿತು.

ಮುಖ್ಯಶಿಕ್ಷಕಿ ಚಿತ್ರಾವತಿ ಚಿಗುರುಪಾದೆ ಮತ್ತು ಶಿಕ್ಷಕ ವೃಂದ, ಪಿ.ಟಿ.ಎ. ಗಣ್ಯರ ಸಮಕ್ಷಮದಲ್ಲಿ ಸನ್ಮಾನಿಸಲಾಯಿತು. ಪಿ.ಟಿ.ಎ. ಅಧ್ಯಕ್ಷ ಇಬ್ರಾಹಿಂ ಹನೀಫಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ನಡೆಯಿತು.

ಶಾಲಾ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಸುಜಾತಾ ಶೆಟ್ಟಿ, ಮಂಜೇಶ್ವರ ಬಿ.ಆರ್.ಸಿ. ತರಬೇತುದಾರ ಸುಮಯ್ಯ, ಆಶಾ ಕಾರ್ಯಕರ್ತೆ ವಿನುತಾ ಕುಮಾರಿ ಮತ್ತು ಹಿರಿಯ ಶಿಕ್ಷಕ ರಿಯಾಜ್ ಪೆರಿಂಗಡಿ ಉಪಸ್ಥಿತರಿದ್ದರು.

ಶಿಕ್ಷಕಿ ಧನ್ಯಾ ಶುಭಹಾರೈಸಿದರು. ಮುಖ್ಯಶಿಕ್ಷಕಿ ಚಿತ್ರಾವತಿ ಚಿಗುರುಪಾದೆ ಸ್ವಾಗತಿಸಿದರು. ಫಾತಿಮತ್ ಫಸೀನಾ ವಂದಿಸಿದರು. ಅಬ್ದುಲ್ ಬಶೀರ್ ಸುಬ್ಬಯ್ಯಕಟ್ಟೆ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net