ಕಲಾಪೋಷಕರ ಆಶೀರ್ವಾದ ಶ್ರೀರಕ್ಷೆ : ವಸಂತ ಗೌಡ ಅನಿಸಿಕೆ

Published on

ಬೆಳ್ತಂಗಡಿ: ಯಕ್ಷಗಾನ ಕಲೆ ನಮಗೆ ಬದುಕಿನ ದಾರಿ ತೋರಿಸಿದೆ. ಸರ್ವ ಸಮರ್ಪಣಾ ಭಾವದಿಂದ ರಂಗದಲ್ಲಿ ತೊಡಗಿಸಿಕೊಂಡ ಕಲಾವಿದರಿಂದ ಕಲೆ ಬೆಳಗಿದೆ, ಕಲಾವಿದನೂ ಬೆಳೆದಿದ್ದಾನೆ. ಕಲಾಪೋಷಕರ ಆಶೀರ್ವಾದ ಕಲಾವಿದರಿಗೆ ಶ್ರೀರಕ್ಷೆ ಎಂದು ಹಿರಿಯ ಯಕ್ಷಗಾನ ಕಲಾವಿದ ವಸಂತ ಗೌಡ ಹೇಳಿದರು.

ಇಡೂರು ಕುಂಜ್ಞಾಡಿಯಲ್ಲಿ ಕೇದಿಗೆ ಮನೆ ಆನಂದ ಶೆಟ್ಟಿ ಹಾಗೂ ಮಕ್ಕಳು ನಡೆಸಿದ ಶ್ರೀ ಧರ್ಮಸ್ಥಳ ಮೇಳದ ಸೇವೆ ಬಯಲಾಟದ ರಂಗವೇದಿಕೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಭಾಗವತ ಸಿರಿಬಾಗಿಲು ರಾಮಕೃಷ್ಣ ಮಯ್ಯ ಕೆ., ಹಿರಿಯ ಕಲಾವಿದರಾದ ವಸಂತ ಗೌಡ ಕಾಯರ್ತಡ್ಕ ಹಾಗೂ ಯುವ ಪ್ರತಿಭೆ ಶ್ರೀ ಶರತ್ ಶೆಟ್ಟಿ ತೀರ್ಥಹಳ್ಳಿ ಅವರನ್ನು ಸನ್ಮಾನಿಸಲಾಯಿತು.

ಸೇವಾಕರ್ತರಾದ ಆನಂದ ಶೆಟ್ಟಿ, ರಾಘವೇಂದ್ರ ಶೆಟ್ಟಿ, ಶ್ರೀಕಾಂತ್.ಎಂ.ಶೆಟ್ಟಿ ಕಾಲ್ತೋಡು, ಶಶಿಕಾಂತ್ ಶ್ಯಾನುಭಾಗ್ ಜನ್ನಾಲ್, ರಾಜಾರಾಂ ಶೆಟ್ಟಿ ಕಾಡಿನಕಲ್ಲು, ನಾಗರಾಜ ಶೆಟ್ಟಿ ಹರ್ಕೂರು ಹಾಗೂ ಮೇಳದ ಮೆನೇಜರ್ ಗಿರೀಶ್ ಹೆಗ್ಡೆ ಮತ್ತು ಪುಷ್ಪರಾಜ್ ಶೆಟ್ಟಿ ಉಪಸ್ಥಿತರಿದ್ದರು. ಬಳಿಕ ಗಜೇಂದ್ರ ಮೋಕ್ಷ-ಶ್ರೀನಿವಾಸ ಕಲ್ಯಾಣ ಯಕ್ಷಗಾನ ಕಾರ್ಯಕ್ರಮ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net