ರಾಜ್ಯಮಟ್ಟದ ಕ್ರೀಡಾಳುಗಳಿಗೆ ಗೌರವಾರ್ಪಣೆ

Sub_Sports
Published on

ಸುಬ್ರಹ್ಮಣ್ಯ: ಟೆನ್ನಿಕಾಯ್ಟಿ ಮತ್ತು ಟೇಕ್ವಾಂಡೋ ಸ್ಪರ್ಧೆಯಲ್ಲಿ ರಾಜ್ಯಮಟ್ಟದಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಿದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಎಸ್‌ಎಸ್‌ಪಿಯು ಕಾಲೇಜಿನ ನಾಲ್ಕು ಮಂದಿ ವಿದ್ಯಾರ್ಥಿಗಳನ್ನು ಶುಕ್ರವಾರ ಕಾಲೇಜಿನ ಪ್ರಾಚಾರ್ಯ ಸೋಮಶೇಖರ ನಾಯಕ್ ಪದಕ ಮತ್ತು ಪ್ರಮಾಣ ಪತ್ರ ನೀಡಿ ಗೌರವಿಸಿದರು.

ಪದವಿಪೂರ್ವ ಕಾಲೇಜು ಬಾಲಕರ ವಿಭಾಗದ ರಾಜ್ಯಮಟ್ಟದ ಟೆನ್ನಿಕಾಯ್ಟಿ ಸ್ಪರ್ಧೆಯಲ್ಲಿ ದ.ಕ.ಜಿಲ್ಲಾ ತಂಡ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿತ್ತು. ಈ ತಂಡದಲ್ಲಿದ್ದ ಕಾಲೇಜಿನ ಪ್ರಥಮ ಕಲಾ ವಿಭಾಗದ ವಿದ್ಯಾರ್ಥಿ ಯಜ್ಞೇಶ್ ದೇವರಗದ್ದೆ ಅವರನ್ನು, ರಾಜ್ಯಮಟ್ಟದ ಬಾಲಕಿಯರ ವಿಭಾಗದ ಟೆನ್ನಿಕಾಯ್ಟಿ ಪಂದ್ಯಾಟದಲ್ಲಿ ಭಾಗವಹಿಸಿದ್ದ ಸುಪ್ರಿಯಾ ಸುಬ್ರಹ್ಮಣ್ಯ ಮತ್ತು ಕೃತೀಕ್ಷಾ ಹಾಗೂ ರಾಜ್ಯಮಟ್ಟದ ಟೇಕ್ವಾಂಡೋ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಚಾಣಸ್ಯ ಕಟುವಾಲ್ ಛೇತ್ರಿ ಅವರನ್ನು ಪ್ರಾಚಾರ್ಯರು ಅಭಿನಂದಿಸಿದರು.

ಹಿರಿಯ ಉಪನ್ಯಾಸಕಿ ರೇಖಾರಾಣಿ ಸೋಮಶೇಖರ್, ದೈಹಿಕ ಶಿಕ್ಷಣ ಉಪನ್ಯಾಸಕ ರಾಧಾಕೃಷ್ಣ ಚಿದ್ಗಲ್, ಹಿರಿಯ ಉಪನ್ಯಾಸಕಿ ಜಯಶ್ರೀ ವಿ.ದಂಬೆಕೋಡಿ, ಉಪನ್ಯಾಸಕರಾದ ಮನೋಜ್ ಕುಮಾರ್ ಬಿ.ಎಸ್., ಪ್ರವೀಣ್ ಎ., ರತ್ನಾಕರ ಸುಬ್ರಹ್ಮಣ್ಯ, ಉಪನ್ಯಾಸಕಿಯರಾದ ಸವಿತಾ ಕೈಲಾಸ್, ಸುಧಾ, ಸೌಮ್ಯಾ ದಿನೇಶ್, ಶ್ರುತಿ, ಸೌಮ್ಯಕೀರ್ತಿ, ಪೂರ್ಣಿಮಾ, ಭವ್ಯಶ್ರೀ ಹರೀಶ್ ಕುಲ್ಕುಂದ, ಮಾನಸಾ ಭಟ್ ಕ್ರೀಡಾಸಾಧಕರನ್ನು ಅಭಿನಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net