

ಕೊಳ್ಳೇಗಾಲ: ತಾಲೂಕಿನ ಸಿದ್ದಯ್ಯನಪುರ ಗ್ರಾಮದಲ್ಲಿ ಭಾನುವಾರ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಹಾಗೂ ಮಾಜಿ ಶಾಸಕ ದಿ.ಎಸ್.ಜಯಣ್ಣ ಅವರಿಗೆ ಶ್ರದ್ಧಾಂಜಲಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.
ಎಸ್.ಜಯಣ್ಣ ಅವರ ಭಾವಚಿತ್ರಕ್ಕೆ ಗ್ರಾಮಸ್ಥರು ಪುಷ್ಪಾರ್ಚನೆ ಮಾಡಿ ಮೌನಾಚರಣೆ ಮೂಲಕ ಸಂಪಾಪ ಸೂಚಿಸಿದರು.
ಮುಖಂಡ ಗುಣಶೇಖರ್ ಮಾತನಾಡಿ, ಕ್ಷೇತ್ರಕ್ಕೆ ಎಸ್. ಜಯಣ್ಣ ಅವರ ಕೊಡುಗೆ ಅಪಾರವಾಗಿದೆ. ಸಿದ್ದಯ್ಯನಪುರ ಗ್ರಾಮದಲ್ಲಿ ಜಯಣ್ಣ ಅವರು ಬಾಲ್ಯದ ದಿನಗಳನ್ನು ಕಳೆದಿದ್ದರು. ಗ್ರಾಮದ ಅಭಿವೃದ್ಧಿಗಾಗಿ ಸಾಕಷ್ಟು ಶ್ರಮಿಸಿದ್ದರು. ಅವರ ಅಗಲಿಕೆ ಕ್ಷೇತ್ರಕ್ಕೆ ನಷ್ಟ ಉಂಟುಮಾಡಿದೆ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎನ್.ಚಾಮರಾಜು, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಂಜೇಗೌಡ, ಗುಣಶೇಖರ್, ಮಹದೇವ, ಲಿಂಗರಾಜು, ಲಕ್ಷ್ಮಣಮೂರ್ತಿ, ಕಾಂತರಾಜು, ಸಂತೋಷ್, ಮಹದೇವ, ಚಂದ್ರಶೇಖರ್, ತುಬಾರ್, ಕಂಠೇಶ್, ಪುಟ್ಟರಾಜು, ನಾಗರಾಜು, ಬಾಲರಾಜು ಇತರರಿದ್ದರು.